ಮೂಕಪ್ಪ ಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವ.! ಶ್ರೀಶೈಲ ಜಗದ್ಗುರುಗಳಿಂದ ಬಸವನಿಗೆ ಉಪದೇಶ
ಹಾವೇರಿ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರ ಹುಚ್ಚೇಶ್ವರ ಮಠದಲ್ಲಿ ನೂತನ ಶ್ರೀಗಳಿಗೆ ಗುರು ಪಟ್ಟಾಧಿಕಾರ ಮಹೋತ್ಸವವು ಶ್ರೀಶೈಲ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು.
ಸಾಮಾನ್ಯವಾಗಿ ಸ್ವಾಮಿಗಳ ಪಟ್ಟಾಧಿಕಾರವೆಂದರೆ ನೂತನ ವಟುವಿಗೆ ನಡೆಯುತ್ತದೆ. ಆದರೆ ಗುಡ್ಡದ ಮಲ್ಲಾಪುರ ಮಠದಲ್ಲಿ 3 ಶತಮಾನಗಳಿಂದಲೂ ಬಸವನಿಗೆ ಪಟ್ಟಾಧಿಕಾರ ನಡೆಯುವುದು ಪರಂಪರೆ. ಅದರಂತೆ ಮೂಲ ಮೂಕಪ್ಪಸ್ವಾಮಿಗಳೇ ಮರುಜನ್ಮತಾಳಿ ಕಬ್ಬೂರು ಗ್ರಾಮದಲ್ಲಿ ಜನಿಸಿದ್ದರು ಎಂಬುದು ಭಕ್ತರ ನಂಬಿಕೆ. ಹಾಗೆ ಜನಿಸಿದ ಕರುವಿಗೆ ಶ್ರೀಮಠದ ಪರಂಪರೆಯಂತೆ ಎಲ್ಲ ಸಂಸ್ಕಾರಗಳನ್ನು ನೀಡಿ ಇಂದು ಶ್ರೀಶೈಲ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಷಟಸ್ಥಲ ಪಟ್ಟಾಧಿಕಾರ ನೆರವೇರಿಸಲಾಯಿತು. ಕೋಣಂದೂರು, ತೊಗರ್ಸಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು, ಸಾವಿರಾರು ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.