ಪ್ರತಿ ತಾಲ್ಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ; ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

Dc covid care centre chitradurga john mines Vedanta

 

ಚಿತ್ರದುರ್ಗ

ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿದ್ದು ಇದನ್ನು ತುಂಡರಿಸಲು ಎಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.

ನಗರದ ತಮಟಕಲ್ಲು ರಸ್ತೆಯಲ್ಲಿನ ಬಿಸಿಎಂ ಮೆಟ್ರಿಕ್ ನಂತರದ ಹಾಸ್ಟೆಲ್‍ನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಕೋವಿಡ್ ಕೇರ್ ಸೆಂಟರ್ ಪರಿಶೀಲನೆ ನಡೆಸಿ ಮಾತನಾಡಿದರು.

ತಮಟಕಲ್ಲು ರಸ್ತೆಯಲ್ಲಿರುವ ಬಿಸಿಎಂ ಹಾಸ್ಟೆಲ್ ನಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಾಗುತ್ತಿದ್ದು ಇಲ್ಲಿ 250 ಹಾಸಿಗೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿಗೆ ಬರುವವರಿಗೆ ವಸತಿ, ಊಟದ ಜೊತೆಗೆ, ಮಂಚ, ಹಾಸಿಗೆ, ಪ್ಯಾನ್, ಸೊಳ್ಳೆಪರದೆ ಸೇರಿದಂತೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಈ ಕೆಲಸವನ್ನು ಸಾಮಾಜಿಕ ಒಣೆಗಾರಿಕೆ ನಿಧಿಯಡಿ ಜಾನ್ ಮೈನ್ಸ್ ಪ್ರವೀಣ್‍ಚಂದ್ರ ಇವರು ಬೆಡ್ ವ್ಯವಸ್ಥೆಯನ್ನು ಮಾಡಿದ್ದು ಕೆಲವೇ ದಿನಗಳಲ್ಲಿ ಇದು ಕಾರ್ಯಾರಂಭವಾಗಲಿದೆ.

ಕೋವಿಡ್ ಪಾಸಿಟೀವ್ ಬಂದು ಸಾಮಾನ್ಯ ಲಕ್ಷಣ ಹೊಂದಿರುವವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಅವಕಾಶ ಇದೆ. ಇದಕ್ಕಾಗಿ ಪ್ರತ್ಯೇಕವಾದ ಶೌಚಾಲಯ, ಬೆಡ್ ರೂಂ ವ್ಯವಸ್ಥೆ ಬೇಕಾಗುತ್ತದೆ. ಆದರೆ ಇದಿಲ್ಲದಿರುವವರು ಕೋವಿಡ್ ಕೇರ್ ಸೆಂಟರ್‍ನಲ್ಲಿ ಇದ್ದು ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇಲ್ಲದೆ ಮನೆಯಲ್ಲಿದ್ದು ಮನೆಯವರಿಗೆಲ್ಲರಿಗೂ ಕೋವಿಡ್ ಹರಡಲಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಎಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದು ಕೋವಿಡ್ ನಿಂದ ಗುಣಮುಖರಾಗಿ ತಮ್ಮ ಕುಟುಂಬವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕೆಂದು ಮನವಿ ಮಾಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿಯು ವೇದಾಂತ ಕಂಪನಿಯವರ ಸಹಕಾರದಲ್ಲಿ ನೂರು ಹಾಸಿಗೆ ಸಾಮಥ್ರ್ಯದ ಕೋವಿಡ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದ್ದು ತೀವ್ರನಿಗಾ ಘಟಕವನ್ನು ಇಲ್ಲಿ ಸ್ಥಾಪಿಸಲು ಕೇಳಲಾಗಿದೆ. ಇದು ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಮೂರನೇ ಅಲೆಯನ್ನು ಗುರಿಯಾಗಿಸಿಕೊಂಡು ಇನ್ನಷ್ಟು ಹಾಸಿಗೆಗಳು ಹಾಗೂ ಆಕ್ಸಿಜನ್‍ನೆಟೆಡ್ ಬೆಡ್ ಮತ್ತು ಪ್ರತಿ ತಾಲ್ಲೂಕಿನಲ್ಲಿಯು ಪ್ರತ್ಯೇಕ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.

ಜಾನ್ ಮೈನ್ಸ್‍ನವರು 10 ಆಕ್ಸಿಜನ್‍ನೆಟೆಡ್ ಬೆಡ್, ಆರ್‍ಟಿಪಿಸಿಆರ್ ಲ್ಯಾಬ್‍ಗೆ ಪ್ರತ್ಯೇಕ ಆರ್.ಓ, 65 ಜಂಬೂ ಸಿಲಿಂಡರ್, ಸಿಸಿ ಕ್ಯಾಮೆರಾ, ಯು.ಪಿ.ಎಸ್‍ನ್ನು ನೀಡಿದ್ದು ಇಂತಹ ಸಂದರ್ಭದಲ್ಲಿ ಇವರ ಸೇವೆ ಶ್ಲಾಘನೀಯ.

ತಹಶೀಲ್ದಾರ್ ವೆಂಕಟೇಶಯ್ಯ, ಜಾನ್ ಮೈನ್ಸ್ ಸಹಾಯಕ ಮಹಾವ್ಯವಸ್ಥಾಪಕ ರಣದಿವೆ, ವ್ಯವಸ್ಥಾಪಕರಾದ ದೀಪಕ್, ಅಜಿತ್, ವಿನಯ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!