ದಾವಣಗೆರೆ ಮೇಯರ್ ಎಸ್ ಟಿ ವಿರೇಶ್ ರಿಂದ ಮನೆಯಲ್ಲೇ ಕೊವಿಡ್ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಉಚಿತ ಆಹಾರದ ವ್ಯವಸ್ಥೆ: ಕರೆ ಮಾಡಿ ನಿಮ್ಮ ವಿಳಾಸಕ್ಕೆ ಆಹಾರ ತಲುಪಿಸುತ್ತೆ ಪ್ರೇರಣಾ ಯುವಸಂಸ್ಥೆ ತಂಡ

ಹೆಚ್ ಎಂ ಪಿ ಕುಮಾರ್.
ದಾವಣಗೆರೆ: ಪ್ರೇರಣ ಯುವಸಂಸ್ಥೆ ದಾವಣಗೆರೆ ವತಿಯಿಂದ ಕೊರೋನಾ ವೈರಸ್ಸಿಗೆ ತುತ್ತಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ, ಮನೆಯಲ್ಲಿ ನಿಮಗೆ ಮಾಡಿಕೊಳ್ಳಲು ಕಷ್ಟವೆನಿಸುತ್ತಿರುವ ಸಾರ್ವಜನಿಕರಿಗೆ, ಉಚಿತವಾಗಿ ಆಹಾರವನ್ನ ತಲುಪಿಸಲು ವ್ಯವಸ್ಥೆಯನ್ನು ಮಾಡಲಾಗಿದೆ. ಆಹಾರ ಬೇಕಾದವರು ನಿಮ್ಮಗಳ SRF ಸಂಖ್ಯೆ ಮತ್ತು ವಿಳಾಸವನ್ನು ಕರೆ ಮಾಡಿ ನಮ್ಮೊಂದಿಗೆ ಹಂಚಿಕೊಳ್ಳಿ, ನಿಮ್ಮ ಮನೆಯ ಬಾಗಿಲಿಗೆ ರುಚಿಯಾದ, ಶುಚಿಯಾದ ಮತ್ತು ಪೌಷ್ಟಿಕ ಆಹಾರವನ್ನು ತಲುಪಿಸುತ್ತೇವೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ಮಹಾ ಪೌರರಾದ ಎಸ್ ಟಿ ವಿರೇಶ್ ” ಗರುಡವಾಯ್ಸ್ ” ಗೆ ತಿಳಿಸಿದ್ದಾರೆ.
ಆಹಾರ ಬೇಕಾದವರು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ : 9945977433.
ಈ ನಂಬರ್ ಗೆ ಕರೆ ಮಾಡಬೇಕಾದ ಅಥವಾ ಮೆಸೇಜ್ ಕಳುಹಿಸಬಹುದಾದ ಸಮಯ:
ಬೆಳಗಿನ ಉಪಹಾರಕ್ಕಾಗಿ:
ಹಿಂದಿನ ದಿವಸ ಸಂಜೆ 7:00 ರಿಂದ ರಾತ್ರಿ 9:00 ರವರೆಗೆ
ಮದ್ಯಾಹ್ನದ ಭೋಜನಕ್ಕಾಗಿ:
ಅದೇ ದಿವಸ ಬೆಳಿಗ್ಗೆ 9:00 ರಿಂದ 11:00 ರವರೆಗೆ.
ರಾತ್ರಿಯ ಊಟಕ್ಕಾಗಿ:
ಅದೇ ದಿವಸ ಮಧ್ಯಾಹ್ನ 4:00 ರಿಂದ ಸಂಜೆ 6:00 ರವರೆಗೆ
“ಈ ಸೇವೆಯೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ದಾವಣಗೆರೆ ನಗರದ ಕೋವಿಡ್ ರೋಗಿಗಳಿಗೆ ಮಾತ್ರ” ಸಂಪೂರ್ಣ ಉಚಿತ
“ಅನ್ನಂ ಪರಬ್ರಹ್ಮ ಸ್ವರೂಪಂ’ “ಸೇವೆಯೇ ಮನುಜ ಧರ್ಮ” ವೇದವಾಕ್ಯ ದೊಂದಿಗೆ ಪ್ರೇರಣಾ ಯುವಸಂಸ್ಥೆ ವತಿಯಿಂದ ಈ ಸತ್ಕಾರ್ಯ ಮಾಡಲಾಗುತ್ತಿದೆ, ಯಾರಿಗಾದರೂ ಇದರಲ್ಲಿ ಕೈಜೋಡಿಸಲು ಮನಸ್ಸಿದ್ದರೆ ಈ ಕೆಳಕಂಡ ಮೊಬೈಲ್ ನಂಬರಿಗೆ ಸಂಪರ್ಕಿಸುವಂತೆ ಮೇಯರ ಎಸ್ ಟಿ ವಿರೇಶ್ ತಿಳಿಸಿದ್ದಾರೆ.
ಮೊ : 9945977433, 9448178087
ದಾವಣಗೆರೆ ಜಿಲ್ಲಾ ಖಾಸಗಿ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ (ಅ)
ಸೇವಾ ಭಾರತಿ, ದಾವಣಗೆರೆ. ಭಾರತ ವಿಕಾಸ ಪರಿಷತ್, ದಾವಣಗೆರೆ, ಇವರುಗಳು ಕೂಡ ಈ ಸತ್ಕಾರ್ಯದಲ್ಲಿ ಕೈ ಜೊಡಿಸಿದ್ದಾರೆ.
ಮೇಯರ್ ಎಸ್ ಟಿ ವಿರೇಶ್ ಉಚಿತ ಆಹಾರ ತಲುಪಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ ಈ ಕೆಳಗಿನ ಲಿಂಕ್ ಓತ್ತಿ ವಿಡಿಯೋ ನೋಡಿ.