ದೇವರು ಮೆಚ್ಚುವಂತ ಪುಣ್ಯದ ಕೆಲಸ ಮಾಡಿದ ಕೊರಟಗೆರೆ ಯುವಕರ ತಂಡ.! ವೃದ್ಧೆಗೆ ಕನಸಿನ ಸೂರು.! ಪುನೀತ್ ನಿಲಯ ನಾಮಕರಣ

ತುಮಕೂರು: ಕೊರಟಗೆರೆ ಫ್ರೆಂಡ್ಸ್ ಗ್ರೂಪ್ ತಂಡ ಮತ್ತು ಜಗ್ಗೇಶ್ ಅಭಿಮಾನಿಗಳ ತಂಡ ದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ದೇವರು ಮೆಚ್ಚುವಂತಹ ಪುಣ್ಯದ ಕೆಲಸ ವನ್ನು ಕೊರಟಗೆರೆ ಪಟ್ಟಣದ ಬಡ ವೃದ್ಧೆ ರಂಗಮ್ಮ ಅಜ್ಜಿಗೆ ಕನಸಿನ ಸೂರು ಪುನೀತ್ ನಿಲಯ ಪುನೀತ್ ರಾಜ್ ಕುಮಾರ್ ರವರ ಸವಿನೆನಪಿಗಾಗಿ ಅವರ ಹೆಸರು ನಾಮಕರಣ ಮಾಡುವ ಮೂಲಕ ಸುಂದರವಾದ ಮನೆ ಕಟ್ಟಿಕೊಟ್ಟು ಇಂದು ಅಜ್ಜಿಗೆ ಹಸ್ತಾಂತರ ಮಾಡಿದರು
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ವೀರಭದ್ರ ಚಾರ್ಯ ಸ್ವಾಮೀಜಿಗಳು ಮತ್ತು ವಿಶ್ವ ಮಾನವ ಹೋರಾಟಗಾರ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿದ್ಧಲಿಂಗ ಗೌಡರು ಮತ್ತು ಫ್ರೆಂಡ್ಸ್ ಗ್ರೂಪ್ ತಾಲ್ಲೂಕು ಅಧ್ಯಕ್ಷರಾದ ರವಿ ಕುಮಾರ್ ಜಗ್ಗೇಶ್ ಅಭಿಮಾನಿಗಳ ತಂಡದ ಅಧ್ಯಕ್ಷರಾದ ಮಲ್ಲಣ್ಣ , ವಿಶ್ವ ಮಾನವ ಹೋರಾಟಗಾರರು ಮತ್ತು ಪತ್ರಕರ್ತರಾದ ನವೀನ್ ಕುಮಾರ್ ಮತ್ತು ತಂಡದ ಇತರ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯರಾದ ನಂದೀಶ್ ಜಿ ಎಸ್ ಎಂ ಗ್ರೂಪ್ ರಘು ,ಪತ್ರಕರ್ತ ಮಿತ್ರರು ಮತ್ತು ಫ್ರೆಂಡ್ಸ್ ಗ್ರೂಪ್ ಜಗ್ಗೇಶ್ ಅಭಿಮಾನ ಬಳಗ ತಂಡದ ಸದಸ್ಯರು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ತಂಡದ ಸದಸ್ಯರಾದ ಮಹಮ್ಮದ್ ಫಾರೂಕ್ ಸುರೇಶ್ ಬಾಬು ತನ್ವೀರ್ ಹಾಜರಿದ್ದರು
ಬಡವರ ನೊಂದವರ ಶೋಷಿತರಿಗೆ ಸಹಾಯ ಮಾಡುತ್ತಾ ಅತ್ಯುತ್ತಮವಾದ ಸಮಾಜಸೇವೆ ಮಾಡುತ್ತಿರುವ ಫ್ರೆಂಡ್ಸ್ ಗ್ರೂಪ್ ತಂಡದ ಅಧ್ಯಕ್ಷರಾದ ಶ್ರೀಯುತ ರವಿಕುಮಾರ್ ಮತ್ತೋರ್ವ ಜಗ್ಗೇಶ್ ಅಭಿಮಾನಿಗಳ ತಂಡದ ಅಧ್ಯಕ್ಷರಾದ ಶ್ರೀ ಮಲ್ಲಣ್ಣ ಭಾಗವಹಿಸಿದ್ದರು