ಅಸಂಘಟಿತ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ

ದಾವಣಗೆರೆ : ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ರವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 32ನೇ ವಾರ್ಡಿನಲ್ಲಿ ಹಿಂದುಳಿದ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಆಹಾರದ ಕಿಟ್ಟುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಓಬಿಸಿ ಅಧ್ಯಕ್ಷ ಅಡಾಣಿ ಸಿದ್ದಪ್ಪ , ಓಬಿಸಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಶ್ರೀನಿವಾಸ್, ಉತ್ತರ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಉಮೇಶ್ ಪಾಟೀಲ್, ರಾಜ್ಯ ಅಲ್ಪಸಂಖ್ಯಾತರ ಮೋರ್ಚಾದ ಸದಸ್ಯ ಅಬ್ಧುಲ್ ಮಜೀದ್ ,ಮಹಿಳಾ ಮೋರ್ಚಾದ ರೇಖಾ ವಾಲಿ, ಜ್ಯೋತಿ ಬಸಪ್ಪ, ಚಂದ್ರಕಲಾ, ಜಿ.ಎಸ್.ಪರಶುರಾಮ, ಕೆ.ನಾಗೇಶ್ ಕುಮಾರ್, ಮಂಜುನಾಥ್ ಇತರರು ಹಾಜರಿದ್ದರು