ಪಾಕಿಸ್ತಾನ ಪ್ರಜೆಗಳ ಜೊತೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ದಾವಣಗೆರೆ ಮೂಲದ ವ್ಯಕ್ತಿ ಹಾಗೂ ಆತನ ಪತ್ನಿ ವಿರುದ್ದ ಪ್ರಕರಣ.! ಎಸ್ ಪಿ ಸ್ಫಷ್ಟನೆ ಏನು.?
ದಾವಣಗೆರೆ: ದಾವಣಗೆರೆ ಮೂಲದ ಅಲ್ತಾಫ್ ಅಹಮ್ಮದ್ ಮತ್ತು ಪಾಕಿಸ್ತಾನ ಮೂಲದ ಆತನ ಪತ್ನಿ ಫಾತೀಮಾ @ ನಿಶಾ ಶರ್ಮಾ ಎಂಬುವವರ ನಕಲಿ ಪಾಸ್ ಪೋರ್ಟ್ ಬಗ್ಗೆ ಹಾಗೂ ಅವರ ಬಂಧನವಾಗಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿರುವ/ ವರದಿಯಾಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ ಹಾಗೂ ಯಾರನ್ನೂ ಬಂಧನ ಮಾಡಿರುವುದಿಲ್ಲ ಎಂದು ದಾವಣಗೆರೆ ಎಸ್ ಪಿ ಮಾಧ್ಯಮ ಹಾಗೂ ಪೋಲಿಸ್ ವಾಟ್ಸ್ ಆಪ್ ಗ್ರೂಪ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಕರಣವೇನು.?
ಇತ್ತೀಚೆಗೆ ಸೆಪ್ಟೆಂಬರ್ 29 ರಂದು ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್ ಪಡೆದಿರುತ್ತಾರೆ ಎಂದು ಚೆನ್ನೈ ಎರ್ ಫೊರ್ಟ್ ನಲ್ಲಿ ಬಾಂಗ್ಲಾದೇಶದಿಂದ ವಾಪಸ್ ಬರುವಾಗ ಚೆನ್ನೈ ವಲಸೆ ವಿಭಾಗದ ಅಧಿಕಾರಿಗಳು ಕೆಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿರುತ್ತದೆ. ಅದರಲ್ಲಿ ದಾವಣಗೆರೆ ಮೂಲದ ವ್ಯಕ್ತಿ ಅಲ್ತಾಫ್ ಮೊಹಮ್ಮದ್ ಹಾಗೂ ಆತನ ಪತ್ನಿ ಫಾತೀಮಾ ಗೋಹತ್ @ ನಿಶಾ ಶರ್ಮಾ ಸೇರಿದಂತೆ ಮೊಹಮ್ಮದ್ ಯಾಸೀನ್ @ ಕಾರ್ತೀಕ್ ಶರ್ಮಾ ಮತ್ತು ಜೈನಾಬಿ ನೂರ್ @ ನೇಹಾ ಶರ್ಮಾ ಇವರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿರುತ್ತದೆ.
ಅಲ್ತಾಫ್ ಮೊಹಮ್ಮದ್ ಪತ್ನಿ ಪಾತೀಮಾ ಗೋಹತ್ @ ನಿಶಾ ಶರ್ಮಾ ಪಾಕಿಸ್ತಾನದ ಪ್ರಜೆ ಆಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿರುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ. ದಾವಣಗೆರೆ ಮೂಲದ ಅಲ್ತಾಫ್ ತನ್ನ ಪತ್ನಿ ಜೊತೆ ದಾವಣಗೆರೆಯಲ್ಲಿನ ಮನೆಗೆ ಅಗಾಗ್ಗೆ ಬಂದು ಹೋಗಿದ್ದು ಈ ವಿಚಾರಕ್ಕೆ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ದಾವಣಗೆರೆಗೆ ಬಂದು ಹೋಗಿದ್ದಾರೆ ಎನ್ನಲಾಗಿದೆ.
ಅಲ್ತಾಫ್ ತಂದೆ ಈ ಹಿಂದೆ ದಾವಣಗೆರೆಯಲ್ಲಿ ಹೆಲ್ತ್ ಇನ್ಸಪೆಕ್ಟರ್ ಆಗಿದ್ದು ನಗರದ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ಸ್ವಂತ ಮನೆಯಿದ್ದು ಮನೆಯನ್ನು ಬಾಡಿಗೆಗೆ ನೀಡಿ ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ.
ದಾವಣಗೆರೆ ನಗರದಲ್ಲಿ ಪಾಕಿಸ್ತಾನದ ಪ್ರಜೆಗಳ ಬಂಧನ ಎಂದು ಕೆಕ ಮಾಧ್ಯಮದಲ್ಲಿ ಸುದ್ದಿಯನ್ನು ನೋಡಿ ದಾವಣಗೆರೆ ಎಸ್ ಪಿ ಸ್ಪಷ್ಟನೆ ನೀಡಿದ್ದು, ಬೆಂಗಳೂರಿನಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಹಾಗೂ ಈ ಪ್ರಕರಣದಲ್ಲಿ ದಾವಣಗೆರೆಯಲ್ಲಿ ಯಾವುದೇ ಕೇಸ್ ದಾಖಲಾಗಿಲ್ಲ ಎಂದಿದ್ದಾರೆ. ಒಟ್ಟಾರೆ ಪಾಕಿಸ್ತಾನದ ಪ್ರಜೆಗಳು ನಕಲಿ ದಾಖಲೆ ನೀಡಿ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೃಷ್ಟಿ ಮಾಡಿಕೊಂಡು ಅಕ್ರಮವಾಗಿ ಭಾರತದ ಅದರಲ್ಲೂ ಬೆಂಗಳೂರಿನಲ್ಲಿ ನೆಲೆಸಿರುವ ಬಗ್ಗೆ ಬೆಂಗಳೂರು ಜಿಗಣಿ ಪೋಲಿಸ್ ಠಾಣೆಯಲ್ಲಿ ನಾಲ್ಕು ಜನರು ಹಾಗೂ ಇನ್ನಿತರರ ವಿರುದ್ದ ಒಂದು ಪ್ರಕರಣ ಹಾಗೂ ಚೆನ್ನೈ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳಿಂದ ಒಂದು ಪ್ರಕರಣ ದಾಖಲಾಗಿದ್ದು ಇನ್ನೂ ಹೆಚ್ಚಿನ ಮಾಹಿತಿಗಾಗಿ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.