ಉಚ್ಚಂಗಿದುರ್ಗದಲ್ಲಿ ಸಿಡಿಲಿನ ಹೊಡೆತಕ್ಕೆ ತೆಂಗಿನಮರಕ್ಕೆ ಬೆಂಕಿ

ವಿಜಯನಗರ: ವಿಜಯನಗರ ಜಿಲ್ಲಾ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ದಲ್ಲಿ ಸಿಡಿಲಿನ ಹೊಡೆತಕ್ಕೆ ತೆಂಗಿನ ಮರಕ್ಕೆ ಬೆಂಕಿ ಹತ್ತಿದ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಘಟನೆಯನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಸಂಜೆ ಗುಡುಗು-ಸಿಡಿಲಿನ ಆರ್ಭಟ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿತ್ತು. ದಿಢೀರ್ ಸಿಡಿಲಿನ ಹೊಡೆತಕ್ಕೆ ತೆಂಗಿನ ಮರದಲ್ಲಿ ಬೆಂಕಿ ಹತ್ತಿಕೊಂಡಿತು.