ಸಪ್ತಪದಿ ತುಳಿದ ದಂಪತಿಗೆ ಒಂದೇ ವೇಳೆ ಹೃದಯಾಘಾತದಿಂದ ಸಾವು.! ದಾವಣಗೆರೆಯಲ್ಲಿ ಹೃದಯ ವಿದ್ರಾವಕ ಘಟನೆ

ದಾವಣಗೆರೆ : ಸಾಮಾನ್ಯವಾಗಿ ಗಂಡ-ಹೆಂಡತಿ ಸಂಬಂಧ ಸ್ಬರ್ಗದಲ್ಲೇ ನಿಶ್ಚಿತವಾಗಿರುತ್ತದೆ ಎಂದು ಮದುವೆಗೆ ಮುಂಚೆ ಅನೇಕರು ಮಾತನಾಡುತ್ತಾರೆ…ಆದರೆ !ಮದುವೆಯಾದ ಮೇಲೆ ಯಾರು, ಯಾವಾಗ ಮೃತಪಡುತ್ತಾರೆ ಎಂದು ಗೊತ್ತಿಲ್ಲ…ಆದರೆ ಇಲ್ಲೊಂದು ಪ್ರಕರಣದಲ್ಲಿ ಗಂಡ-ಹೆಂಡತಿ ಇಬ್ಬರು ಒಂದೇ ಸಮಯದಲ್ಲಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ನಗರದ ಎಸ್ ಓಜಿ ಕಾಲೋನಿ ನಿವಾಸಿ ಫಕೀರಪ್ಪ ಗೋಖಾವಿ (87), ಚಂದ್ರಮ್ಮ ಫಕೀರಪ್ಪ ಗೋಖಾವಿ (70) ಮೃತಪಟ್ಟ ದುರ್ದೈವಿಗಳು. ಫಕೀರಪ್ಪರವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಶನಿವಾರ ರಾತ್ರಿ  ಹೃದಯಘಾತವಾಗಿ ಕುಸಿದು ಬಿದ್ದಿದ್ದಾರೆ..ಇದನ್ನು ನೋಡಿದ ಪತ್ನಿ ಚಂದ್ರಮ್ಮ ಕೇವಲ ಹತ್ತು ನಿಮಿಷದಲ್ಲಿ ಮೃತಪಟ್ಟಿದ್ದಾರೆ. ಇವರ ಸೊಸೆ ಪುಷ್ಪ ಹೊಳೆಹೊನ್ನೂರಿಗೆ ಹೋದಾಗ ಘಟನೆ ನಡೆದಿದೆ..

ಪತಿ ಫಕೀರಪ್ಪ ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದರೆ, ಪತ್ನಿ ಸ್ವಾತಂತ್ರ್ಯ ಸಿಗುವ ವೇಳೆ ಹುಟ್ಟಿದ್ದರು. ಇವರಿಬ್ಬರ ಜೀವನ ಅನ್ಯೋನ್ಯವಾಗಿತ್ತು.. ಮದುವೆಯಾಗಿ ಒಂದೇ ದಿನದಲ್ಲಿ ಡಿವೈರ್ಸ್ ಕೊಡುವ ಈ ಕಾಲದಲ್ಲಿ ಅನೇಕ ವರ್ಷಗಳ ಕಾಲ ತಾನು ಕಟ್ಟಿಕೊಂಡ ಪತಿಯೇ ಜೀವಾಳ ಎಂದು ಸುಮಾರು 55 ವರ್ಷಗಳ ಕಾಲ ಜತೆ ಹೆಜ್ಜೆಗೆ ಹೆಜ್ಜೆ ಹಾಕಿ ಜೀವನ ಮಾಡುತ್ತಿದ್ದ ದಂಪತಿ ಈಗ ಇಲ್ಲವಾಗಿದ್ದಾರೆ..ಈರುಳ್ಳಿ ಮಾರ್ಕೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಫಕೀರಪ್ಪ ಮಕ್ಕಳು ದೊಡ್ಡವರಾದ ಬಳಿಕ ಕೆಲಸ ಬಿಟ್ಟಿದ್ದರು…ಸಮೀಪದ ಅಂಗಡಿಯೊಂದರಲ್ಲಿ ಕುಳಿತು ಹರಟೆ ಹೊಡೆಯುತ್ತಾ.‌ಜೀವನ ಸಾಗಿಸುತ್ತಿದ್ದರು..

ಪತ್ನಿ ಪತಿ ಫಕೀರಪ್ಪರ ದಿನಚರಿಯನ್ನು ‌ನೋಡಿಕೊಳ್ಳುತ್ತಿದ್ದರು‌‌‌‌.. ಅಲ್ಲದೇ ಅವರ ಲಾಲನೆ ಪಾಲನೆ ಮಾಡುತ್ತಿದ್ದರು. ಜನರ ಜತೆ ಯಾವಾಗಲೂ ಫಕೀರಪ್ಪ ಬೆರೆಯುತ್ತಿದ್ದು, ನಗು..ನಗುತ್ತಾ ಜೀವನ ಸಾಗಿಸುತ್ತಿದ್ದರು. ಅಂದು ಸೊಸೆ ಪುಷ್ಪ ಊರಿಗೆ ಹೊರಟಿದ್ದರು… ಹುಷಾರಾಗಿ ಹೋಗಿ ಬಾರವ್ವ ಎಂದು ಅಂಗಡಿ ಮುಂದೆ ಕುಳಿತು ಕಳುಹಿಸಿ ಕೊಟ್ಟ ಮಾವ ಮತ್ತೆ ಈ ಮಾತು ಹೇಳಲೇ ಇಲ್ಲ… ಅಂಗಡಿಯಿಂದ ಬಂದ ಫಕೀರಪ್ಪ ಮನೆಗೆ ಹೋದ ವೇಳೆ ಸಂಜೆ ಎದೆ ನೋವು ಕಾಣಿಸಿಕೊಂಡು ಹಾಗೆಯೇ ಕುಸಿದು ಬಿದ್ದಿದ್ದಾರೆ. ಈ ಘಟನೆ ನೋಡಿದ ಚಂದ್ರಮ್ಮಗೂ ಕೂಡ ಹೃದಯಘಾತವಾಗಿ ಅವರು ಕೂಡ ಕೊನೆಯುಸಿರುಳಿದಿದ್ದಾರೆ‌‌‌..ಶಾಮನೂರು ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಭಾನುವಾರ ನಡೆಯಿತು.ಮೃತರಿಗೆ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ‌ . ಒಟ್ಟಿನಲ್ಲಿ ಸಪ್ತಪದಿ ತುಳಿದ ದಂಪತಿ ಒಟ್ಟಿಗೆ ಇಹ ಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಅತ್ತೆ-ಮಾವ ಇಬ್ಬರಿಗೂ ಒಂದೇ ಸಮಯದಲ್ಲಿ ಹೃದಯಾಘಾತವಾಗಿದೆ‌ ಮಾವ ಫಕ್ಕೀರಪ್ಪ ಗೋಕಾವಿ ಮೃತಪಟ್ಟ ಹತ್ತೇ ನಿಮಿಷದಲ್ಲಿ ಅವರ ಅತ್ತೆ ಕೂಡಾ ಕೊನೆಯುಸಿರೆಳೆದಿದ್ದಾರೆ.
-ಪುಷ್ಪಾ, ಫಕೀರಪ್ಪ ಸೊಸೆ

Leave a Reply

Your email address will not be published. Required fields are marked *

error: Content is protected !!