ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ರಾಜರೋಷವಾಗಿ ತಿರುಗಾಡಿದ ಕಾಡಾನೆ ..!
ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಕಾಡಾನೆ ಕಂಡು ಬಂದಿದೆ. ನಾಳ ಸಮೀಪದ ಪಾಂಡಿಬೆಟ್ಟು ಗ್ರಾಮಸ್ಥರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆ ಕರಂಬಾರು ಸುದೆಪಿಲ ಸಮೀಪ ನದಿಯಲ್ಲಿ ತಿರುಗಾಡುತ್ತಿರುವುದು ಪತ್ತೆಯಾಗಿದೆ.
.ಈ ಆನೆ ಕೊಯ್ಯೂರು, ಕಣಿಯೂರು ದಾಟಿ ಮಲೆಂಗಲ್ಲು, ಪದ್ಮುಂಜ ಪೊಯ್ಯ ಮೂಲಕ ಮೊಗ್ರು ಗ್ರಾಮದ ಬುಳೇರಿಗೆ ಬಂದು ಕರಂಬಾರು ಸುದೆಪಿಲ ಸಮೀಪ ನೇತ್ರಾವತಿಯಲ್ಲಿ ಸ್ನಾನ ಮಾಡಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಡೆಗೆ ಸಂಚಾರಿಸಿದೆ.ನೇತ್ರಾವತಿ ನದಿಯಲ್ಲಿ ಆನೆ ತಿರುಗಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ
ಮತ್ತೆ ಎಲ್ಲಿ ಈ ಒಂಟಿ ಸಲಗ ಪ್ರತ್ಯಕ್ಷವಾಗಿ ತೊಂದರೆ ಕೊಡಲಿದೆಯೋ ಎಂಬ ಭಯ ಜನತೆಯಲ್ಲಿದೆ. ಆನೆಯನ್ನು ಕಾಡಿಗಟ್ಟಲು ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ಆರಂಭವಾಗಿದೆ.