ದಾವಣಗೆರೆಗೆ ಬಜೆಟ್ ನಲ್ಲಿ ಅಲ್ಪ ಸಿಹಿ ಸ್ವಲ್ಪ ಕಹಿ – ಶಿವಕುಮಾರ ಕಣಸೋಗಿ ಪ್ರಾಧ್ಯಾಪಕ

ಶಿವಕುಮಾರ ಕಣಸೋಗಿ ಪ್ರಾಧ್ಯಾಪಕ
ದಾವಣಗೆರೆ: ದಾವಣಗೆರೆಯಲ್ಲಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ, ವಿಮಾನ ನಿಲ್ದಾಣ ಸ್ಥಾಪನೆಗೆ ಅವಕಾಶ ನೀಡಿದ್ದು ಒಳ್ಳೆಯ ಬೆಳವಣಿಗೆ. ಸೂರಗೊಂಡನಕೊಪ್ಪದಲ್ಲಿ ಸೇವಾಲಾಲ್ ಹಾಗೂ ಹೊದಿಗೆರೆಯಲ್ಲಿ ಷಹಾಜಿ ಮಹಾರಾಜ್ ಸಮಾಧಿ ಅಭಿವೃದ್ಧಿಗೆ ತಲಾ ₹ 5 ಕೋಟಿ ಅನುದಾನ ನೀಡಲಾಗಿದೆ. ಜಿಲ್ಲೆಯ ಹೊನ್ನಾಳಿ, ಹರಿಹರ, ಸಂತೆಬೆನ್ನೂರು ಮೊದಲಾದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಈ ಬಾರಿಯೂ ಅವಕಾಶ ಸಿಕ್ಕಿಲ್ಲ. ಆನಗೋಡು, ಕೊಂಡಜ್ಜಿ, ಸೂಳೆಕೆರೆ ಅಭಿವೃದ್ಧಿಗೆ, ಕೈಗಾರಿಕಾ ಕಾರಿಡಾರ್, ರಾಜಮುಡಿ ಅಕ್ಕಿ ಸಂರಕ್ಷಣಾ ಘಟಕ, ವೀಳ್ಯದೆಲೆ ವಿಶೇಷ ತಳಿ ರಕ್ಷಣೆ ಆದ್ಯತೆ ನೀಡಿದ್ದರೆ ಅನುಕೂಲ ಆಗುತ್ತಿತ್ತು.
ಅದಾಗ್ಯೂ ಶಿಕ್ಷಣ, ಕೃಷಿ, ಭದ್ರಾ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದು ಅಭಿನಂದನೀಯ.
ಶಿವಕುಮಾರ ಕಣಸೋಗಿ, ದಾವಣಗೆರೆ ವಿಶ್ವವಿದ್ಯಾನಿಲಯ