ಕೋವಿಡ್ ಸಂಕಷ್ಟದ ನಡುವೆಯೂ ಆಶಾದಾಯಕ ಬಜೆಟ್: ಶಿವನಗೌಡ ಟಿ. ಪಾಟೀಲ್

ಕೋವಿಡ್ ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಜನಸಾಮಾನ್ಯರಿಗೆ ಹೊರೆ ಆಗದ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೀಡಿದ್ದಾರೆ. ಕೃಷಿ, ನೀರಾವರಿ, ಕಾರ್ಮಿಕರು, ಬಡವರು, ಸರ್ವ ಸಮುದಾಯಗಳಿ ಹೆಚ್ಚಿನ ಆದ್ಯತೆ ನೀಡುವ ಮೂಲಕ ಜನಪರ ಆಯವ್ಯಯ ಮಂಡಿಸಿದ್ದಾರೆ
ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಮಂಡನೆ ಮಾಡಿದ ಚೊಚ್ಚಲ ಬಜೆಟ್. ಕೋವಿಡ್ ನಿಂದ ಆರ್ಥಿಕತೆ ಕುಸಿದಿತ್ತು. ಇದಕ್ಕೆ ಚೈತನ್ಯ ನೀಡುವ ಕೆಲಸವನ್ನು ಬಜೆಟ್ ನಲ್ಲಿ ಮಾಡಿದ್ದಾರೆ. ಇದು ಆಶಾದಾಯಕ ಬಜೆಟ್ ಎಂಬುದರಲ್ಲಿ ಎರಡು ಮಾತಿಲ್ಲ. ರೈತ ಸಮುದಾಯಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ.
ಕೃಷಿ, ನೀರಾವರಿಯ, ಎತ್ತಿನ ಹೊಳೆ, ಮಹಾದಾಯಿ, ಮೇಕೆದಾಟು, ಕೃಷ್ಣ ಮೇಲ್ದಂಡೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಿದ್ದಾರೆ. ರೈತ ಪರ ,ಕೂಲಿ ಕಾರ್ಮಿಕರ ಪರ,ಎಲಾ ಸಮುದಾಯವನ್ನು ಒಳಗೊಂಡ ಬಜೆಟ್ ಅನ್ನು ಮಂಡನೆ ಮಾಡಿ ಎಲ್ಲರ ಮೆಚ್ಚುಗೆಗೆ ಮುಖ್ಯ ಮಂತ್ರಿಗಳು ಪಾತ್ರರಾಗಿದ್ದಾರೆ ಎಂದು ತಿಳಿಸಿದ್ದಾರೆ.