ಎಸ್ ಪಿ ಸಮ್ಮುಖದಲ್ಲಿ ಸೈಲೈನ್ಸರ್‌ಗಳ ಮೇಲೆ ಹತ್ತಿದ ರೋಡ್ ರೋಲರ್.!

road roller kills Silencer's

ದಾವಣಗೆರೆ ; ಹೀಗೆ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಮೇಲೆ ಹತ್ತುತ್ತಿರುವ ಬುಲ್ಡೆಜರ್. ಸಾವಿರಾರು ರೂಪಾಯಿ ಖರ್ಚು ಮಾಡಿ  ಸೈಲೈನ್ಸರ್‌ನ್ನು ಆರ್ಟೇಷನ್ ಮಾಡಿಕೊಂಡು ನಗರದಲ್ಲಿ ಓಡಾಡುತ್ತಿದ್ದ ಸೈಲೆನ್ಸರ್‌ಗಳು ಪೊಲೀಸ್ ಠಾಣೆಯಲ್ಲಿ ಕಂಡು ಬಂದವು.


ಹೌದು..ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಜನಸಂದಣಿ, ಕಾಲೇಜು ರೋಡ್ ಸೇರಿದಂತೆ ಬೇಕಾಬಿಟ್ಟಿ ವಾಹನ ಓಡಿಸುತ್ತಾ ಕರ್ಕಶ ಶಬ್ದ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಬುಲೆಟ್ ಸೈಲೆನ್ಸರ್‌ನ್ನು ವಶಕ್ಕೆ ಪಡೆದ ದಕ್ಷಿಣ ಸಂಚಾರ ಪೊಲೀಸರು ಸೈಲೆನ್ಸರ್ ಮೇಲೆ ಬುಲ್ದೆಜರ್ ಹತ್ತಿಸಿದರು. ಈ ಬುಲೆಟ್ ವಾಹನಗಳು ಜನರಿಗೆ ಕಿರಿ ಕಿರಿಯಾಗುವಂತೆ ಶಬ್ದ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದರು. ಅಲ್ಲದೇ 50 ದ್ವಿಚಕ್ರ ವಾಹನದ ಸೈಲೆನ್ಸರ್‌ಗಳನ್ನು ಕಿತ್ತು ಅದರ ಮೇಲೆ ರೋಡ್ ರೋಲರ್ ಚಲಾಯಿಸಿ ಅನುಪಯುಕ್ತ ಗೊಳಿಸಿದ್ದಾರೆ.

ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸುವಾಗ ಸೈಲೆನ್ಸರ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಮತ್ತೆ ಅವರಿಗೆ ನೀಡಿದ್ದಲ್ಲಿ ಪುನ: ಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಂಡ 51 ಸೈಲೆನ್ಸರ್ ಗಳನ್ನು ರೋಡ್ ರೋಲರ್ ಮೂಲಕ ಅನುಪಯುಕ್ತ ಗೊಳಿಸಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!