ಕಮಲ ಬಿಟ್ಟು ಕೈ ಹಿಡಿದ ಮತದಾರ.! ಶಿವಮೂರ್ತಿ ಶಾಸ್ತ್ರೀ ಭವಿಷ್ಯ 

ಕಮಲ ಬಿಟ್ಟು ಕೈ ಹಿಡಿದ ಮತದಾರ.! ಶಿವಮೂರ್ತಿ ಶಾಸ್ತ್ರೀ ಭವಿಷ್ಯ 

ದಾವಣಗೆರೆ : ರಾಜ್ಯದಲ್ಲಿ ಬಿಜೆಪಿ ಸರಕಾರ ಕೇವಲ 85 ಸೀಟ್‌ಗಳನ್ನು ಮಾತ್ರ ತೆಗೆದುಕೊಳ್ಳಲಿದೆ ಎಂದು ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದ ಭುಜಂಗ ಮಠದ ಶಿವಮೂರ್ತಿ ಶಾಸಿಗಳು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಎಲ್ಲ ಸಮೀಕ್ಷೆಗಳು ಕಾಂಗ್ರೆಸ್ ಕರುನಾಡಿನಲ್ಲಿ ತನ್ನ ಅಧಿಪತ್ಯವನ್ನು ಸಾಧಿಸುತ್ತೇವೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಭುಜಂಗ ಮಠದ ಶಿವಮೂರ್ತಿ ಶಾಸಿಗಳು ನುಡಿದ ಭವಿಷ್ಯ ಕಮಲಪಾಳಯದಲ್ಲಿ ಆತಂಕ ಮೂಡಿದೆ.

ರಾಜ್ಯದಲ್ಲಿ ಕೇಸರಿ ರಹಿತ ಸರಕಾರ ರಚನೆಯಾಗಲಿದೆ ಎಂಬ ಹೇಳಿಕೆ ನೀಡಿದ್ದು, ಈ ಬಾರಿ ಭಾರತೀಯ ಜನತಾ ಪಕ್ಷ ಅಧಿಕಾರ ಹಿಡಿಯುವುದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಗರು ಮಾಡಿದ ತಪ್ಪಿನ ಪರಿಣಾಮವಾಗಿ ಚುನಾವಣೆಯಲ್ಲಿ 85 ಸ್ಥಾನವನ್ನು ಪಡೆಯಲು ಹರಸಹಾಸ ಪಡಬೇಕಾಗಿದೆ. ಇನ್ನು ಕಾಂಗ್ರೆಸ್ 115 ರಿಂದ 120ರವರೆಗೆ ಸ್ಥಾನಗಳನ್ನು ಪಡೆದು ಸರಕಾರವನ್ನು ಏಕಾಂಗಿಯಾಗಿ ರಚಿಸುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ರಾಷ್ಟ್ರೀಯ ಪಕ್ಷದ ಮುಖಂಡರುಗಳು ಲಿಂಗಾಯತ ಸಮುದಾಯವನ್ನು ಗುರಿಯಾಗಿಸಿಕೊಂಡು ವಾಗ್ದಾಳಿಯನ್ನು ಮಾಡುತ್ತಿರುವುದು. ಒಬ್ಬರು ಲಿಂಗಾಯಿತ ಮುಖ್ಯಮಂತ್ರಿ ಭ್ರಷ್ಟ ಎಂದರೆ, ಮತ್ತೊಬ್ಬರು ನಮಗೆ ಲಿಂಗಾಯತರ ಅಗತ್ಯವಿಲ್ಲ ಎಂದು ಸಮುದಾಯವನ್ನು ಕಡೆಗಣಿಸಿರುವುದು ಬಿಜೆಪಿಗೆ ಹಿನ್ನೆಡೆಯಾಗಿದೆ. ವಿಪರ್ಯಾಸ ಎಂದರೆ ಎರಡು ರಾಷ್ಟ್ರೀಯ ಪಕ್ಷಗಳಲ್ಲಿನ ಯಾವುದೇ ಲಿಂಗಾಯಿತ ಮುಖಂಡರು, ಹಾಲಿ, ಮಾಜಿ ಶಾಸಕರುಗಳು ಈ ಆಪಾದನೆಗಳಿಗೆ, ಈ ನಿರ್ಲಕ್ಷಗೆ ಯಾವುದೇ ಒಂದು ಪ್ರತಿಕ್ರಿಯೆ ನೀಡದೇ ಇರುವುದು ದುರ್ದೈವ.

ಲಿಂಗಾಯತ ಮುಖ್ಯಮಂತ್ರಿ ಭ್ರಷ್ಟರು, ಲಿಂಗಾಯಿತರು ನಮಗೆ ಅವಶ್ಯಕತೆ ಇಲ್ಲ ಎನ್ನುವಂತಹ ಮನಸ್ಥಿತಿ ಇರುವ ಪಕ್ಷಗಳಿಂದ ಹೊರಬರುವ ಪ್ರಯತ್ನವನ್ನು ಇದುವರೆಗೂ ಮಾಡದೆ ಇರುವುದು ಲಿಂಗಾಯಿತ ಸಮುದಾಯಕ್ಕೆ ಯಕ್ಷಪ್ರಶ್ನೆಯಾಗಿದೆ.

ಇನ್ನು ರಾಜ್ಯದಲ್ಲಿ ಕುಟುಂಬ ರಾಜಕಾರಣಕ್ಕೆ ಹೆಸರುವಾಸಿಯಾದ ಜಾತ್ಯಾತೀತ ಜನತಾದಳವು ತನ್ನ ಎಲ್ಲಾ ಕೌಟುಂಬಿಕ ಸಮಸ್ಯೆಯನ್ನು ಬದಿಗಿರಿಸಿ, ರಾಜ್ಯದ ಚುಕ್ಕಾಣಿಯನ್ನು ಹಿಡಿಯಲು ಸಾಧ್ಯವೇ ಎನ್ನುವಂತ ಯಕ್ಷಪ್ರಶ್ನೆಯಾಗಿದೆ. ಆದರೂ ಕುಮಾರಸ್ವಾಮಿಯವರ ಪ್ರಬಲ ಹೋರಾಟದಿಂದ 15 ರಿಂದ 20 ಸ್ಥಾನಗಳನ್ನು ಗಳಿಸಬಹುದಾಗಿದೆ ಎಂದಿದ್ದಾರೆ.ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಶಾಸಿಗಳು ನುಡಿದಂತಹ ಭವಿಷ್ಯ ನೂರಕ್ಕೆ ನೂರರಷ್ಟು ಸತ್ಯವಾಗಿತ್ತು.

ಚುನಾವಣಾ ಅಖಾಡದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಸೋಲು-ಗೆಲುವಿನ ಬಗ್ಗೆ ಸಾಮಾನ್ಯ ವಾಗಿ ಹೇಳುವುದಾದರೆ, ಒಬ್ಬ ಅಭ್ಯರ್ಥಿಯ ಸೋಲು! ಮತದಾರರಿಗಿಂತ ಅಭ್ಯರ್ಥಿಯೇ ಕೆಳಗಿರುವ ಎರಡನೇ ಮತ್ತು ಮೂರನೇ ಹಂತದ ಮುಖಂಡರೇ ಕಾರಣವಾಗಿರುತ್ತಾರೆ. ಕಾರಣ ಹಣದ ಆಮಿಷಕ್ಕೆ ಬಲಿಯಾದಂತಹ ಮುಖಂಡರು ಮೂರು-ನಾಲ್ಕು ದಿನಗಳಿಗೊಮ್ಮೆಪಕ್ಷಾಂತರ ಮಾಡುವುದು ಅಭ್ಯರ್ಥಿಗಳಿಗೆ ಸಮಸ್ಯೆಯಾಗಿ ಕಾಡಲಿದೆ.

ಮತದಾನ ಸಮೀಪ ವಾದಂತೆ ಕಾರ್ಯಕರ್ತರಾಗಲಿ, ಮುಖಂಡರಾಗಲಿ ಪಕ್ಷ ಬದಲಾವಣೆ ಮಾಡುವುದರಿಂದ ಪಕ್ಷಾಂತರಗಳಿಗೆ ಲಾಭವೇ ಹೊರತು, ಹೆಚ್ಚಿನದಾಗಿ ಅಭ್ಯರ್ಥಿಗಳಿಗೆ ಲಾಭವಾಗುವುದಿಲ್ಲ. ಆದರೆ ಈ ಎಲ್ಲಾ ಆಟಗಳನ್ನು ಮೂಕ ಪ್ರೇಕ್ಷಕರಾಗಿ ವೀಕ್ಷಿಸುತ್ತಿರುವಂತಹ ಮತದಾರ ಎಲ್ಲಾ ಭವಿಷ್ಯವಾಣಿಗಳನ್ನು ಪಕ್ಷಾಂತರಿಗಳ ಒಣ ಭರವಸೆಗಳನ್ನ ಬದಲಾಯಿಸುವಂತ ಶಕ್ತಿ ರಾಜ್ಯದ ಮತದಾರ ಪ್ರಭುವಿಗೆ ಇದೆ ಎಂದು ಭವಿಷ್ಯ ಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!