ದಾವಣಗೆರೆ: ನಗರದ ಜಯರತ್ನ ಎಂಬ ಮಹಿಳೆ ತಮ್ಮ ಮರಣದ ನಂತರ ದೇಹದಾನ ಮಾಡಲು ಜಜಮು ವೈದ್ಯಕೀಯ ಕಾಲೇಜಿಗೆ ಮನವಿ ಪತ್ರ ನೀಡಿದ್ದಾರೆ.
ಇಲ್ಲಿನ ವಿದ್ಯಾನಗರದವರಾದ ೬೫ ವಯಸ್ಸಿನ ಜಯರತ್ನ ಅವರು ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಿತದೃಷ್ಠಿಯಿಂದ ದೇಹದಾನ ಮಾಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.