ಅಮ್ ಆದ್ಮಿ ಪಕ್ಷ ಮುಂದೊಂದು ದಿನ ರಾಜ್ಯದ ಚುಕ್ಕಾಣಿ ಹಿಡಿಯಲಿದೆ- ಗೋವಿಂದರಾಜ್ ಜಿ

ದಾವಣಗೆರೆ :ಅಮ್ ಆದ್ಮಿ ಪಕ್ಷವು ಕರ್ನಾಟಕದಲ್ಲಿ ತಳಮಟ್ಟದಿಂದ ಸಂಘಟನೆ ಹೊಂದುತ್ತಿದ್ದು ಇದು ಕೂಡ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಮನೆಯಲ್ಲಿಯೂ ಅಮ್ ಆದ್ಮಿ ಪಕ್ಷದ ಸದಸ್ಯರು ಇರಲಿದ್ದಾರೆ ಎಂದು ಅಮ್ಮ ಆದ್ಮಿ ಪಕ್ಷದ ಜಗಲೂರು ಕ್ಷೇತ್ರದ ಆಕಾಂಕ್ಷಿ ಹಾಗೂ ಜಿಲ್ಲಾ ಖಜಾಂಚಿ ಗೋವಿಂದರಾಜ್ ಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶದಲ್ಲಿ ಈಗಾಗಲೇ ಅಮ್ ಆದ್ಮಿ ಪಕ್ಷ 2 ರಾಜ್ಯಗಳ ಆಡಳಿತದ ಚುಕ್ಕಾಣಿ ಹಿಡಿದಿದ್ದು ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಲಿದೆ ಇದಕ್ಕೆ ಅಮ್ ಆದ್ಮಿ ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ದೆಹಲಿ ಮುಖ್ಯಮಂತ್ರಿ  ಕೇಜ್ರಿವಾಲ್  ರವರ ಮುಂದಾಲೋಚನೆ ಮತ್ತು ದೆಹಲಿಯನ್ನು ಅಭಿವೃದ್ಧಿ ಪಡಿಸಿದ ಎಲ್ಲಾ ಅಂಶಗಳನ್ನು ಜನತೆಗೆ ತಿಳಿಯುವಂತೆ ಹೇಳುವುದು ಮುಖ್ಯವಾಗಿದೆ. ದೆಹಲಿ ಸರ್ಕಾರ ಕಡು ಬಡವರು ಕೂಡ ನೆಮ್ಮದಿಯ ಜೀವನ ನಡೆಸುವ ರೀತಿಯಲ್ಲಿ ಆಸ್ಪತ್ರೆ, ಶಾಲೆಗಳು, ವಿದ್ಯುತ್, ನೀರು ಹೀಗೆ ಅತ್ಯವಶ್ಯಕ ವಸ್ತುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಅದೇ ರೀತಿ ಅಮ್ ಆದ್ಮಿ ಪಕ್ಷ ಅಧಿಕಾರ ವಹಿಸುವ ರಾಜ್ಯಗಳಲ್ಲಿ ಈ ಸವಲತ್ತುಗಳನ್ನು ನೀಡಲು ಕಂಕಣ ಬದ್ಧವಾಗಿದೆ ಎಂದರು.
ಬಡವರು, ಮಧ್ಯಮ ವರ್ಗದ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿದೆ ಹಾಗಾಗಿ ನಮ್ಮ ಪಕ್ಷಕ್ಕೆ ಬಡವರು ಮತ್ತು ಮಧ್ಯಮ ವರ್ಗದ ಜನರು ಹೆಚ್ಚು ಒಲವು ತೋರಿಸಲಿದ್ದಾರೆ, ಮುಂಬರುವ ದಿನಗಳಲ್ಲಿ ಇಡೀ ದೇಶದಲ್ಲಿ ಅಮ್ ಆದ್ಮಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ಪ್ರಪಂಚವೇ ಬೆರಗಾಗುವಂತೆ ಪ್ರಗತಿಯನ್ನು ಸಾಧಿಸಲಿದ್ದೇವೆ ಎಂದರು.
ಈಗಿರುವ ಪಕ್ಷದ ಕಾರ್ಯಕರ್ತರು ಪಕ್ಷವನ್ನು ಸಂಘಟಿಸಿ ಪಕ್ಷವನ್ನು ಬೆಳೆಸಬೇಕು ಇಲ್ಲಿ ಸಾಮಾನ್ಯ ಕಾರ್ಯಕರ್ತನೆ ಪಕ್ಷದ ಬೆನ್ನೆಲುಬು ಆತನನ್ನೇ ಪಕ್ಷ ಗುರುತಿಸಿ ಸ್ಥಾನಮಾನವನ್ನು ನೀಡುತ್ತದೆ ಹಾಗಾಗಿ ಕಾರ್ಯಕರ್ತರು ಶ್ರಮವಹಿಸಿ ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದು ಕಿವಿಮಾತು ಹೇಳಿದರು. ಜೊತೆಗೆ ಪಕ್ಷದ ಎಲ್ಲಾ ಸದಸ್ಯರಿಗೂ ಕಾರ್ಯಕರ್ತರಿಗೂ ಹಾಗೂ ಪಕ್ಷದ ಅಭಿಮಾನಿಗಳಿಗೂ ಹೊಸ ವರ್ಷದ ಶುಭಾಶಯವನ್ನು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!