ಹೊಟ್ಟೆ ನೋವು ಅಂತ ಬಂದೋಳಿಗೆ ಪ್ರೆಗ್ನೆಂಟ್ ಆಗಿದಿಯಾ ಅಂದ್ರು ಡಾಕ್ಟರ್.! ಮದ್ವೆಗೂ ಮುಂಚೆ ಮಗು ಆದ ವಿಷಯ ಮುಚ್ಚಾಕಲು ಮಾಡಿದ್ದೇನು ಗೊತ್ತಾ.?

magu

ದಾವಣಗೆರೆ : ಹೊಟ್ಟೆ ನೋವು ಅಂತ ವೈದ್ಯರ ಬಳಿ ಬಂದ ಹುಡುಗಿಗೆ ವೈದ್ಯರು ನೀನು ಪ್ರೆಗ್ನೆಂಟ್ ಆಗಿದಿಯಾ ಎಂದು ಹೇಳಿದ್ದನ್ನು ಕೇಳಿ ಶಾಕ್ ಆದಳು. ಕೇವಲ ಹುಡುಗಿ ಮಾತ್ರವಲ್ಲದೆ ಈ ವಿಷಯ ತಮ್ಮ ಪೋಷಕರಿಗೆ ತಿಳಿದು ಸಿಡಿಲು ಬಡಿದಂತಾಯಿತು. ಮದ್ವೆ ಮುಂಚೆ ಗರ್ಭ ದರಿಸಿದ ಮಗಳಿಂದ ತಮಗೆ ಊರಲ್ಲಿ, ಸಮಾಜದಲ್ಲಿ ಆಗಬಹುದಾದ ಅವಮಾನ ನೆನಪಿಸಿಕೊಂಡು ಮಗಳು ಪ್ರೆಗ್ನೆಂಟ್ ಆಗಿ ಮಗು ಆಗಿದ್ದ ವಿಷಯ ಮುಚ್ಚಾಕಲು ಏನ್ಮಾಡಿದ್ರು ಗೊತ್ತಾ? ಮುಂದೆ ಓದಿ..

ಅಸಲಿ ಕಥೆ ಏನು ಅಂತಾ?
ಹೊಟ್ಟೆ ನೋವು ಅಂತ ಹುಡುಗಿಯೊಬ್ಬಳು ದಾವಣಗೆರೆ ನಗರದ ಯುನಿಟಿ ಹೇಲ್ತ್ ಕೇರ್ ಆಸ್ಪತ್ರೆಗೆ ಬಂದು ವೈದ್ಯರಲ್ಲಿ ತಪಾಸಣೆ ಮಾಡಿಸಿದ್ದಾಳೆ. ತಪಾಸಣೆ ಮಾಡಿದ ವೈದ್ಯರು ಈ ಹುಡುಗಿಗೆ ನೀನು ಗರ್ಭ ಧರಿಸಿದ್ದೀಯಾ ಎಂದು ಹೇಳಿದ್ದಾರೆ. ನಂತರ ಆಸ್ಫತ್ರೆಯಲ್ಲಿ ಹೆರಿಗೆ ಆಗುತ್ತೆ, ಆ ಹುಡುಗಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಈ ವಿಷಯ ಪೋಷಕರಿಗೆ ಗೊತ್ತಾದಾಗ, ಮದ್ವೆಗೂ ಮುಂಚೆ ತಮ್ಮ ಮಗಳು ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿರುವ ವಿಷಯ ಊರಿನ ಜನಕ್ಕೆ ಗೊತ್ತಾದ್ರೆ ಮಾನ, ಮರ್ಯಾದೆ ಬೀದಿಲಿ ಹರಾಜಾಗುತ್ತೆ ಅಂತ ಚಿಂತೆಯಲ್ಲಿರಬೇಕಾದ್ರೆ ಇದೇ ಆಸ್ಪತ್ರೆಯ ನರ್ಸ್ ಒಬ್ಬರು “ಹೆದರುವ ಅವಶ್ಯಕತೆ ಇಲ್ಲ, ತಮಗೆ ಗೊತ್ತಿರುವ ಸಂಬ0ಧಿಕರೊಬ್ಬರಿಗೆ ಹೆಣ್ಣು ಮಕ್ಕಳು ಇಲ್ಲ, ಅವರಿಗೆ ಕೊಡಬಹುದು ಎಂದು ಧೈರ್ಯ ತುಂಬಿದ್ದಾರೆ. ಅದರಂತೆ ಹುಡುಗಿ ಮತ್ತು ಅವಳ ಪೋಷಕರು ನರ್ಸ್ ಸಲಹೆಯಂತೆ ಹೆಣ್ಣು ಮಗುವನ್ನು ಕೊಟ್ಟಿದ್ದಾರೆ.

ಎಫ್‌ಐಆರ್ ದಾಖಲಾಗಿದ್ದೇಗೆ?.. ಪ್ರಕರಣ ಬೆಳಕಿಗೆ ಬಂದಿದ್ದೇಗೆ..?
ಹೆಣ್ಣು ಮಗು ಕೊಟ್ಟು ಬಚಾವ್ ಆದ್ವಿ ಅಂತ ನಿಟ್ಟುಸಿರು ಬಿಡುವ ಹೊತ್ತಿಗೆ ಮತ್ತೊಂದು ಶಾಕ್ ಬಯಸದೆ ಬಂದಿತ್ತು. ಹೌದು, ಯುನಿಟಿ ಹೇಲ್ತ್ ಕೇರ್ ಆಸ್ಪತ್ರೆಯಲ್ಲಿ ಮಗು ಮಾರಾಟವಾಗಿರುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿಗೆ ಅನಾಮಧೇಯ ವ್ಯಕ್ತಿಯಿಂದ ಮಾಹಿತಿ ತಲುಪಿತ್ತು. ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರ ತಂಡ ಈ ಬಗ್ಗೆ ತನಿಖೆ ನಡೆಸಿದಾಗ ವಿಷಯ ಬೆಳಕಿಗೆ ಬಂತು.  ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಶೇಖರ್ ಅವರು ಫೆ. 14, 2022 ರಂದು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ಫೆ.13 ರಂದು ಮಗುವನ್ನು ಮತ್ತೊಬ್ಬರಿಗೆ ಕೊಡಲಾಗಿತ್ತು.

ಸದ್ಯ ಯಾವ ಹಂತದಲ್ಲಿದೆ ಗೊತ್ತಾ ಪ್ರಕರಣ?
ಮಹಿಳಾ ಪೋಲೀಸ್ ಠಾಣೆಯ ಸಿಪಿಐ ಶಿಲ್ಪ ವೈ.ಎಸ್ ತನಿಖೆ ಮಾಡಿ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದ್ದಾರೆ. ಹಾಗೆಯೇ ಈ ಪ್ರಕರಣಕ್ಕೆ ಸಂಬAಧಪಟ್ಟ ಮಗವಿನ ತಾಯಿ ಸೇರಿದಂತೆ ಪೋಷಕರು ಹಾಗೂ ಮಗುವನ್ನು ಪಡೆದ ಇಬ್ಬರು ಮತ್ತು ಆಸ್ಪತ್ರೆ ನರ್ಸ್ ವಿರುದ್ದ juvenile justice(care and protection of children) Act, 2015(U/s-81); The child care and protection Act 2004 (U/s-10); IPC 1860 (U/s-34,370) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದು, ಮಗುವನ್ನು ಸಹ ಪತ್ತೆ ಮಾಡಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಹೀಗೆ ಇಂತಹ ಪ್ರಕರಣಗಳು ಹಲವು ಕಡೆ ನಡೆದಿದ್ದರೂ ಅವುಗಳನ್ನು ಮುಚ್ಚಾಕುವ ಪ್ರಯತ್ನ ನಡೆಯುತ್ತಲೇ ಇರುತ್ತವೆ. ಯಾರೋ ಒಬ್ಬ ಅನಾಮದೇಯ ವ್ಯಕ್ತಿಯ ಒಂದು ಕರೆ ಈ ಪ್ರಕರಣವನ್ನು ಬೇಧಿಸಲು ಸಹಕಾರಿಯಾಯ್ತು. ಹಾಗಾಗಿ ತಮ್ಮ ವ್ಯಾಪ್ತಿಯಲ್ಲಿ ಮಗು ಮಾರಾಟ ಸೇರಿದಂತೆ ಇತರೆ ಪ್ರಕರಣಗಳು ಬೆಳಕಿಗೆ ಬಂದರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.

 

Leave a Reply

Your email address will not be published. Required fields are marked *

error: Content is protected !!