ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸವರಾಜು ವಿ ಶಿವಗಂಗಾ ಚಾಲನೆ
ಚನ್ನಗಿರಿ : ಸಂತೆಬೆನ್ನೂರಲ್ಲಿ ಶಾಸಕರಾದ ಬಸವರಾಜು ವಿ ಶಿವಗಂಗಾ ಕರ್ನಾಟಕ ಸರ್ಕಾರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚನ್ನಗಿರಿ ಸಂಬಂಧಿಸಿದಂತೆ ಸರ್ಕಾರದ ಆರ್‌ಐಡಿಎಫ್ 29 ಯೋಜನೆಯಡಿಯಲ್ಲಿ ನಾಗೇನಹಳ್ಳಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಗೋಧಾಮು, ಕ್ಯಾಂಟೀನ್ ಕಟ್ಟಡ ಹಾಗೂ ಆರ್ ಸಿ ಸಿ ಡ್ರೈವ್ ನಿರ್ಮಾಣ ಒಟ್ಟು ಎರಡುವರೆ ಕೋಟಿ ಮೌಲ್ಯದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು, ಉಳಿದಂತೆ ನಲ್ಲೂರು ಹಾಗೂ ರಾಜಗೊಂಡನಹಳ್ಳಿ ಸೇರಿದಂತೆ ಹಲವೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಶಂಕು ಸ್ಥಾಪನೆ ನೇರವೆರಿಸಿದರು. ಈ ಸಂಧರ್ಭದಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.