ದ್ವಜಾರೋಹಣ ವೇಳೆ ‘ಶೂ ಯಡವಟ್ಟು’ ಮಾಡಿಕೊಂಡ ಎಸಿ

ಚಿಕ್ಕೋಡಿ: ದ್ವಜಾರೋಹಣ ವೇಳೆ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಯಡವಟ್ಟು ಮೇಲೆ ಯಡವಟ್ಟು ಮಾಡಿಕೊಂಡಿದಾರೆ
ದ್ವಜಾರೋಹಣ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದಲ್ಲದೆ ತರಾತುರಿಯಲ್ಲಿ ಬೂಟು ಕಾಲಿನಲ್ಲೆ ಧ್ವಜಾರೋಹಣ ಮಾಡಿದ್ದಾರೆ. ಬಳಿಕ ಅಂಬೇಡ್ಕರ್ ಹಾಗೂ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲು ಮುಂದಾಗಿದ್ದಾರೆ. ಸಿಬ್ಬಂದಿಗಳು ಹೇಳಿದ ಬಳಿಕ ಉಪವಿಬಾಧಿಕಾರಿ ಮಾಧವ ಗಿತ್ತೆ ಶೂ ಬಿಚ್ಚಿಟ್ಟಿದ್ದಾರೆ. ಶೂವನ್ನು ಸಿಬ್ಬಂದಿಗಳ ಕೈಯಿಂದ ತೆಗೆದು ಬೆರೆಡೆಗೆ ಇಟ್ಟಿದ್ದಾರೆ.
ಮಾಧವ ಗಿತ್ತೆ ಅವರು ಎಲ್ಲಾ ರಾಜಕೀಯ ಗಣ್ಯರು ಬಂದು ಕುಳಿತ ಬಳಿಕ 9:15ಕೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು ಎಸಿ ನಡೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು…