Acb Trap: ಖಾತೆ ಬದಲಾವಣೆಗೆ 1ಲಕ್ಷದ 50 ಸಾವಿರ ಬೇಡಿಕೆ ಇಟ್ಟ ಹರಿಹರ ನಗರ ಸಭೆ ಅಧಿಕಾರಿ.!
ದಾವಣಗೆರೆ : ಖಾತೆ ಬದಲಾವಣೆಗಾಗಿ 1ಲಕ್ಷದ 50 ಸಾವಿರ ರೂ ಬೇಡಿಕೆಯನ್ನು ಫಿರಾದುದಾರಲ್ಲಿ ಇಟ್ಟ ಅಧಿಕಾರಿ revenue officer ಇದೀಗ ಎಸಿಬಿ ACB Trap ಬಲೆಗೆ ಬಿದ್ದಿದ್ದಾರೆ. ಫಿರ್ಯದುದಾರರಾದ ರಾಘವೇಂದ್ರ ಬಿನ್ ಶ್ರೀನಿವಾಸ ಮೂರ್ತಿ, ಇಂಜಿನಿಯರ್, ವಾಸ ಕೆ.ಬಿ. ಬಡಾವಣಿ, ದಾವಣಗೆರೆ ಇವರು ಬಾಬು ಹರ್ರಾಪುರ ಗ್ರಾಮದ ರಿ ಸರ್ವೇ ನಂ.39/3 ರಲ್ಲಿ ಸೈಟ್ ನಂ 7 ರಲ್ಲಿನ 80*50 ಅಡಿ ವಿಸ್ತೀರ್ಣದ ನಿವೇಶನವನ್ನು 1987ನೇ ಇಸವಿನಲ್ಲಿ ಫಿರಾದುದಾರರ ತಂದೆ ಖರೀದಿಸಿದ್ದು, ಅದನ್ನು ಇದುವರೆಗೂ ಖಾತೆ ಬದಲಾವಣೆ ಮಾಡಿಸಿರುವುದಿಲ್ಲ.
ಈ ಬಗ್ಗೆ ಫಿರಾದಿಯು ಹರಿಹರ ನಗರ ಸಭೆಗೆ Harihara Muncipality ಭೇಟಿ ನೀಡಿ ಕಂದಾಯ ವಿಭಾಗದ ಎಸ್.ಡಿ.ಎ ಮಂಜಪ್ಪ ಅವರನ್ನು ಈ ಬಗ್ಗೆ ವಿಚಾರಿಸಿದಾಗ ಮಂಜಪ್ಪನವರು ಫಿರಾದುದಾರರ ದಾಖಲಾತಿಗಳನ್ನು ಪರಿಶೀಲಿಸಿ 1,50,000/- ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ಪ್ರಕರಣ ಕುರಿತು 06.04.2022 ರ ಇಂದು ದಾವಣಗೆರೆ ಎಸಿಬಿ ಪೊಲೀಸ್ ಠಾಣೆಯ ಮೊ.ನಂ: 04/2022 ಕಲಂ: 7(ಎ) ಪಿ.ಸಿ. ಆಕ್ಟ್-1988 ರ ರೀತ್ಯಾ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು, ಇದೇ ದಿನ ಮೇಲ್ದಂಡ ಆಪಾದಿತನು ಹರಿಹರ ನಗರಸಭೆಯ ಎದುರಿನ ಶಿವ ಗಾರ್ಡನ್ ರೆಸ್ಟೋರೆಂಟ್ ನಲ್ಲ ಫಿರಾದಿಯಿಂದ ಲಂಚದ ಹಣ ಪಡೆದ ಸಮಯದಲ್ಲಿ ಟ್ರ್ಯಾಪ್ ಆಗಿರುತ್ತಾರೆ. ಲಂಚದ ಹಣ ರೂ 1.00,000/- ಗಳನ್ನು ಅಮಾನತ್ತುಪಡಿಸಿಕೊಂಡು, ಆಪಾದಿತರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತದೆ. ಸದರಿ ಟ್ರ್ಯಾಪ್ ಕಾರ್ಯಾಚರಣೆಯನ್ನು ಕಲಾ ಕೃಷ್ಣಸ್ವಾಮಿ, ಐಪಿಎಸ್ ಪೊಲೀಸ್ ಅಧೀಕ್ಷಕರು, ಕೇಂದ್ರ ವಲಯ (ಹೆಚ್ಚುವರಿ ಪ್ರಭಾರ) ಪೂರ್ವ ವಲಯ, ಎಸಿಬಿ, ದಾವಣಗೆರೆ ರವರ ಮಾರ್ಗದರ್ಶನದಂತೆ, ಡಿಎಸ್ಪಿ ರವರಾದ ಮಂಜುನಾಥ್, ಪಿಐ ರವರಾದ ಮಧುಸೂಧನ್, ರವೀಂದ್ರ ಕುರುಬಗಟ್ಟಿ ಹಾಗೂ ದಾವಣಗೆರೆ ಎಸಿಬಿ ಠಾಣೆಯ ಸಿಬ್ಬಂದಿಯವರಾದ ಉಮೇಶ್ ಎಸ್. ಆಂಜನೇಯ ವಿ.ಹೆಚ್, ವೀರೇಶಪ್ಪ, ಕಲ್ಲೇಶ್ವರಪ್ಪ, ಧನರಾಜ್, ಮೋಹನ್ ಕುಮಾರ್, ಬಸವರಾಜ್ ಸಿ.ಎಸ್. ವಿನಾಯಕ ಕಟೀಗರ್, ನಾಗರಾಜ್ ರವರು ಪಾಲ್ಗೊಂಡಿದ್ದರು.
Contact: garudavoice21@gmail.com 9740365719