Accident: ಅಪಘಾತದಲ್ಲಿ ಹೆಡ್ ಕಾನ್ಸಟೆಬಲ್ ಗುರುಮೂರ್ತಿ ಸಾವು, ಐಜಿಪಿ – ಎಸ್ ಪಿ ಭೇಟಿ

Accident_ Head Constable Gurumurthy dies in an accident, IGP - SP visit

ದಾವಣಗೆರೆ: (Accident) ದಾವಣಗೆರೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸಟೆಬಲ್ ಗುರುಮೂರ್ತಿ ಅಪಘಾತದಲ್ಲಿ ಮೃತರಾದ ಘಟನೆ ನಡೆದಿದೆ.

ಇಂದು ಸಂಜೆ 05-00 ಗಂಟೆ ಸಮಯದಲ್ಲಿ ದಾವಣಗೆರೆ ನಗರದ ದೇವರಾಜ್ ಅರಸ್ ಬಡಾವಣೆಯ ರಿಂಗ್ ರಸ್ತೆಯ ಪ್ಲೈಓವರ್ ನಲ್ಲಿ ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ‌ವಾಹನದ ಮಧ್ಯೆ ಅಪಘಾತವಾಗಿ ದ್ವಿಚಕ್ರ ‌ವಾಹನದಲ್ಲಿ ಬರುತ್ತಿದ್ದ ಗುರುಮೂರ್ತಿ ಎ. ಸಿ.ಹೆಚ್.ಸಿ 201, ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಕರ್ತವ್ಯ ಇವರು ಮೃತರಾಗಿರುತ್ತಾರೆ.

ಮೃತ ಗುರುಮೂರ್ತಿ ಇವರು ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕು ಇಟಗಿ ಗ್ರಾಮದವರಾಗಿದ್ದು, ದಾವಣಗೆರೆ ನಗರದ ವಿದ್ಯಾನಗರದಲ್ಲಿ ಪತ್ನಿ ಹಾಗೂ ಪುತ್ರನ ಜೊತೆ ವಾಸವಾಗಿದ್ದರು. ಮೃತ ದೇಹವನ್ನು ದಾವಣಗೆರೆ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಬೇಕಾಗಿದೆ.

ಮೃತ ಗುರುಮೂರ್ತಿ ಪೋಲೀಸ್ ಇಲಾಖೆಯಲ್ಲಿ ಶ್ರದ್ಧೆ, ನಿಷ್ಠಾವಂತ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಪಘಾತದ ಮಾಹಿತಿ ತಿಳಿದ ಕೂಡಲೇ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಹಾಗೂ ಎಸ್ ಪಿ ಉಮಾ ಪ್ರಶಾಂತ್ ಭೇಟಿ ನೀಡಿದರು.

ಇತ್ತೀಚಿನ ಸುದ್ದಿಗಳು

error: Content is protected !!