ಕಳ್ಳತನ ಪ್ರಕರಣದ ಆರೋಪಿತನ ಬಂಧನ, ಕೆಟಿಜೆ ನಗರ ಪೋಲಿಸರಿಂದ ಸ್ವತ್ತು ವಶ
ದಿನಾಂಕ ೧೮.೦೪.೨೦೨೪ ರಂದು ಮದ್ಯಾಹ್ನ ಸಮಯದಲ್ಲಿ ಪರ‍್ಯಾದಿ ಶ್ರೀ ಮತಿ ಪ್ರಮೀಳಾ ಗಂಡ ಲೇಟ್ ಯಶವಂತರಾವ್ ಗುಜ್ಜರ್ ವಾಸ ಕೆಟಿಜೆ ನಗರ ೧೫ ಕ್ರಾಸ್ ರವರು ಕೆಟಿಜೆ ನಗರ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಸದರಿಯವರು ಈ ದಿನ ಬೆಳಿಗ್ಗೆ ೧೧.೩೦ ಗಂಟೆ ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ಹೋಗಿದ್ದಾಗ ಯಾರೋ ಕಳ್ಳರು ನಮ್ಮ ಮನೆಯ ಬೀಗವನ್ನು ಮುರಿದು ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ ೯೧ ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗು ೧೩ ಸಾವಿರ ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಅಂತ ನೀಡಿದ ದೂರಿನ ಮೇರೆಗೆ ಠಾಣಾ ಗುನ್ನೆ ೭೩/೨೦೨೪ ಕಲಂ ೪೫೪ ೩೮೦ ಐಪಿಸಿ ರಿತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.
ಸದರಿ ಕೇಸಿನಲ್ಲಿ ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ವಿಜಯಕುಮಾರ ಎಮ್ ಸಂತೋಷ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಮಂಜುನಾಥ ಜಿ ರವರ ಹಾಗೂ ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಮಲ್ಲೇಶ ದೊಡ್ಡಮನಿರವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ನಿರೀಕ್ಷಕರಾದ ಶ್ರೀ ಸುನಿಲ್ ಕುಮಾರ್ ಹೆಚ್ ಎಸ್ ರವರು, ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ನೀರಿಕ್ಷಕರಾದ ಶ್ರೀ ಇಸ್ಮಾಯಿಲ್ ಬಿ ಹಾಗು ಶ್ರೀ ಸಾಗರ ಅತ್ತರವಾಲಾ ಪಿಎಸ್‌ಐ, ಶ್ರೀ ಎನ್.ಆರ್ ಕಾಟೆ ಹಾಗು ಸಿಬ್ಬಂದಿಗಳಾದ ಶಂಕರ್ ಜಾದವ್, ಪ್ರಕಾಶ ಟಿ, ಷಣ್ಮುಖ ಕೆ, ಎಮ್ ಮಂಜಪ್ಪ, ಶಿವರಾಜ್ ಎಮ್ ಎಸ್, ರಾಜನಾಗ ಜಿ ಎನ್, ಎ.ಎಸ್.ಐ ಹಾಗು ಅಕ್ತರ್ ಎಸ್ ಎಮ್, ವೀರೇಶ ವಿ ಹಾಗು ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ ಹಾಗು ಶಾಂತ ಕುಮಾರ ರವರಗಳನ್ನು ಒಳಗೊಂಡ ತಂಡವನ್ನು ರಚನೆ ಮಾಡಿ ಪ್ರಕರಣದ ಆರೋಪಿತನಾದ ಸೈಯ್ಯದ್ ಪಜಲ್, 29 ವರ್ಷ, ಸೆಂಟ್ರೀAಗ್ ಕೆಲಸ ವಾಸ ವಾಸ: ಗೋಪಾಲಪುರ ಚಿತ್ರದುರ್ಗ ಸ್ವಂತ ಊರು ಹೊಸದುರ್ಗ ಚಿತ್ರದುರ್ಗ ಈತನನ್ನು ಬಂಧಿಸಿ, ಆರೋಪಿತನಿಂದ ಒಟ್ಟು 5,51,000/-ರೂ ಬೆಲೆಯ 90.4 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಹಾಗು 4 ಸಾವಿರ ರೂ ನಗದು ಹಣವನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಆರೋಪಿತನ ಪತ್ತೆಯಿಂದ ಕೆಟಿಜೆ ನಗರ ಪೊಲೀಸ್ ಠಾಣೆಯ 02 ಪ್ರಕರಣಗಳು ಪತ್ತೆಯಾಗಿರುತ್ತೆ.
ಸದರಿ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ.