ನಕಲಿ ಬಂಗಾರ ಮಾರಾಟದ ಜಾಲ ಹಿಂದೆ ಖಾಕಿಯೇ ರಕ್ಷಣೆ ಆರೋಪ.! ಸಂತೇಬೆನ್ನೂರು ಪೊಲೀಸ್ ಠಾಣೆಯ ಇಬ್ಬರು ಸೇರಿದಂತೆ ನಾಲ್ವರು ಅಮಾನತು
ದಾವಣಗೆರೆ : ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಹಾಗೂ ಸಂತೇಬೆನ್ನೂರು ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ನಕಲಿ ಬಂಗಾರ ಮಾರಾಟ ಜಾಲಕ್ಕೆ ಕೊನೆಯೇ ಇಲ್ಲದಂತಾಗಿದೆ.
ಅಮಾಯಕ ಹೆಣ್ಣು ಮಕ್ಕಳು, ಬಡವರನ್ನ ಟಾಗ್ರೇಟ್ ಮಾಡುತ್ತಿರುವ ಈ ನಕಲಿ ಬಂಗಾರ ಮಾರಾಟಗಾರರು. ಪದೇ ಪದೇ ಅಮಾಯಕರನ್ನ ವಂಚಿಸುತ್ತಲೇ ಇದ್ದಾರೆ. ಕಣ್ಮುಂದೆ ಇಂಥಹ ಪ್ರಕರಣಗಳು ಬೆಳಕಿಗೆ ಬಂದರೂ ಸಹ ಸಂತೇಬೆನ್ನೂರು ಪೊಲೀಸ್ ಠಾಣೆ ಪೊಲೀಸರು ಮೇಲಾಧಿಕಾರಿಗಳಿಗೆ ತಿಳಿಯದಂತೆ ಡೀಲ್ ಮಾಡಿ ವಂಚಕರಿಗೇ ವಂಚಕರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇತ್ತೀಚೆಗೆ ಹರಿಹರ ತಾಲ್ಲೂಕು ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಗ್ರಾಮದ ಒಬ್ಬ ಹೆಣ್ಣು ಮಗಳಿಗೆ ಕುಲ್ಡಿ ತಿಪ್ಪೇಶ್ ಎಂಬಾತ ಕರೆ ಮಾಡಿ ನಮ್ಮ ಹಳೇ ಮನೆ ಕಡೆವಿದಾಗ, ನಮ್ಮ ಪೂರ್ವಜರು ಇಟ್ಟ ಬಂಗಾರ ಮನೆಯಲ್ಲಿ ಸಿಕ್ಕಿದೆ. ಮಾರುಕಟ್ಟೆಯಲ್ಲಿ 1 ಕೆ.ಜಿ ಬಂಗಾರ 50 ರಿಂದ 60 ಲಕ್ಷ ಆಗುತ್ತದೆ. ನಮ್ಮ ಮನೆಯಲ್ಲಿ ಕಷ್ಟ ಇರುವ ಕಾರಣ ಈ ಬಂಗಾರವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ ಎಂದು ನಂಬಿಸಿದ ಕುಲ್ಡಿ ತಿಪಪೇಶ್ ಮತ್ತು ಆತನ ಗ್ಯಾಂಗ್ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ಸಾಸಲು ಬಳಿ ಆ ಮಹಿಳೆಯನ್ನ ಕರೆಸಿಕೊಂಡು 30 ಲಕ್ಷಕ್ಕೆ ನಕಲಿ ಬಂಗಾರ ನೀಡಿ ವಂಚಿಸಿದ್ದಾರೆ.
ನಂತರ ಮೋಸ ಹೋಗಿರುವುದು ಗೊತ್ತಾಗಿ ಆ ಮಹಿಳೆ ಸಂತೇಬೆನ್ನೂರು ಪೊಲೀಸ್ ಠಾಣೆ ಸಂಪರ್ಕ ಮಾಡಿ ವಿಚಾರ ತಿಳಿಸಿದ್ದಾಳೆ. ಪೂರ್ವಯೋಜಿತ ಕಾರ್ಯಕ್ರಮ ಎಂಬಂತೆ ಈಗಾಗಲೇ ಈ ಬಗ್ಗೆ ತಿಳಿದಿದ್ದ ಸಂತೇಬೆನ್ನೂರು ಸಂತೇಬೆನ್ನೂರು ಪೊಲೀಸ್ ಠಾಣೆಯ ದೊಡ್ಡೇಶ್, ಕೊಟ್ರೇಶ್ ಸೇರಿದಂತೆ ಇನ್ನೂ ಇಬ್ಬರು ಕಾನ್ಸ್ ಟೇಬಲ್‍ಗಳು ಮೋಸಕ್ಕೊಳಗಾದವರಿಗೆ ನ್ಯಾಯ ಕೊಡಿಸುತ್ತೇವೆ ಎಂದು ವಂಚನೆ ಮಾಡಿದ್ದ ಕುಲ್ಡಿ ತಿಪ್ಪೇಶಿ ಗ್ಯಾಂಗ್ ಕರೆದು ಮಾತುಕತೆ ಮಾಡಿ ಹಣ ಪಡೆದು ಮೋಸಕ್ಕೊಳಗಾದ ಮಹಿಳೆಗೆ 19.50 ಸಾವಿರ ಕೊಡುತ್ತೇವೆ ಎಂದು ಆ ಹಣವನ್ನು ಮಧ್ಯವರ್ತಿಗೆ ನೀಡಿದ್ದಾರೆ.
ಉಳಿದ ಹಣವನ್ನು ಆ ಪೊಲೀಸರೇ ಹಂಚಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚುನಾವಣೆ ಹಿನ್ನೆಲೆ ಕರ್ತವ್ಯಕ್ಕೆ ಬಂದಂತಹ ಪೊಲೀಸ್ ಅಧಿಕಾರಿಗಳಿಗೆ ಇದರಲ್ಲಿ ಪಾಲು ನೀಡಲಾಗಿದೆ ಇದೆ ಎನ್ನಲಾಗಿದೆ.
ನಕಲಿ ಬಂಗಾರ ಮಾರಾಟ ಇಂದಿನದ್ದಲ್ಲಾ ಹಲವು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಆದರೆ ಕೆಲ ಪೊಲೀಸರು ಮಾತ್ರ ಎಲ್ಲಾ ಗೊತ್ತಿದ್ದು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ ಸಂಗತಿ. ಹಾಗೂ ಮೇಲಾಧಿಕಾರಿಗಳು ಸಹ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡದಿರುವುದು ಮತ್ತೊಂದು ದುರಂತದ ಸಂಗತಿಯಾಗಿದೆ.
ಈ ಎಲ್ಲಾ ವಿಷಯ ಜಗಜ್ಜಾಹಿರಾದ ನಂತರ ದಾವಣಗೆರೆಯ ಹಿರಿಯ ಪೋಲಿಸ್ ಅಧಿಕಾರಿಗಳು ಮಾಹಿತಿಯನ್ನು ಕೂಲಂಕಷವಾಗಿ ಪರೀಕ್ಷಿಸಲು ಮುಂದಾದಾಗ ಬಯಾನಕ ಸತ್ಯದ ಅನಾವರಣವಾಗಿದೆಂತೆ, ಒಟ್ಟಾರೆ ಹಣದ ದಾಹಕ್ಕೆ ಕಾನೂನು ರಕ್ಷಕರೇ ಭಕ್ಷಕರಾದರೆ ಸಾಮಾನ್ಯರ ಗತಿ ಏನು ಎಂಬ ಮಾತುಗಳ ಕೇಳಿಬರುತ್ತಿವೆ.