ಕುಕ್ಕರ್, ಸೀರೆ ಹಂಚಿಕೆ ಆರೋಪ: ಅಪ್ಪ ಮಗನಿಗೆ ಎದುರಾದ ಸಂಕಷ್ಟ

Accused of sharing kukkar, sari: Father and son face trouble
ದಾವಣಗೆರೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವಾಗಿ ಕುಕ್ಕರ್- ಸೀರೆ ಹಂಚಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರಿಗೆ ಸ್ಪಷ್ಟನೆ ನೀಡುವಂತೆ ಹೈಕೋರ್ಟ್ ನೋಟಿಸ್ ನೀಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣೆ ಆಯುಕ್ತರು ಮತ್ತು ದಾವಣಗೆರೆ ಜಿಲ್ಲಾಧಿಕಾರಿಗಳಿಗೂ ನೋಟಿಸ್ ನೀಡಲಾಗಿದೆ. ಚುನಾವಣೆ ನಡೆದು 8 ತಿಂಗಳಾದರು ತನಿಖೆ ನಡೆಸದೇ ಇರೋದಕ್ಕೆ ನ್ಯಾಯಾಲಯ ಸ್ಪಷ್ಟನೆ ಕೇಳಿದೆ.
ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ಮತ್ತು ಅವರ ಪುತ್ರ ಎಸ್‌ಎಸ್ ಮಲ್ಲಿಕಾರ್ಜುನ್ ದಾವಣಗೆರೆ ಉತ್ತರದಿಂದ ಸ್ಪರ್ಧಿಸಿದ್ದರು. ಚುನಾವಣೆ ಸಮಯದಲ್ಲಿ ಅವರು ನೀತಿ ಸಂಹಿತಿ ಉಲ್ಲಂಘಿಸಿ ಅಕ್ರಮವಾಗಿ ಕುಕ್ಕರ್ ಸೀರೆ ಹಂಚಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ನ್ಯಾಯಾಲಯದ ಮೊರೆ ಹೋಗಿದ್ದ ಪರಾಜಿತ ಅಭ್ಯರ್ಥಿ:
ಈ ಬಗ್ಗೆ ಶಾಮನೂರು ಶಿವಶಂಕರಪ್ಪ ವಿರುದ್ಧ ಗಾಂಧಿನಗರ ಪೊಲೀಸ್ ಠಾಣೆ ಮಲ್ಲಿಕಾರ್ಜುನ ವಿರುದ್ಧ ಕೆಟಿಜಿ ನಗರದಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ದಕ್ಷಿಣ ಪಕ್ಷೇತರ ಪರಾಜಿತ ಅಭ್ಯರ್ಥಿ ಸುಭಾನ್ ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೇಳಿದೆ. ಒಂದು ವೇಳೆ ಇಲ್ಲಿ ಆರೋಪ ಸಾಬೀತಾದರೆ 6 ವರ್ಷ ರಾಜಕೀಯವಾಗಿ ನಿಷೇಧಕ್ಕೆ ಒಳಗಾಗುವ ಸಾಧ್ಯತೆಗಳಿವೆ.
ಡ್ರಾಪ್ ಮಾಡಿದ್ದಕ್ಕೆ ಅಡ್ಡಹಾಕಿ ಹೊಡೆದ್ರು!
ದಾವಣಗೆರೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಯುವಕನಿಗೆ ಅನ್ಯಕೋಮಿನ ಜನರು ಮನಸೋ ಇಚ್ಛೆ ಥಳಿಸಿದ್ದಾರೆ. ಅಷ್ಟೇ ಅಲ್ಲ ಘಟನೆ ಬಳಿಕ ಯುವಕನ ವಿರುದ್ಧವೇ ಫೋಕ್ಸೋ ಕೇಸ್ ದಾಖಲಿಸಿದ್ದಾರೆ.
ಪರಿಚಯಸ್ಥ ಮುಸ್ಲಿಂ ಯುವತಿಗೆ ಡ್ರಾಪ್ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿರೋ ಆರೋಪ ಕೇಳಿಬಂದಿದೆ. ಶುಕ್ರವಾರ ಸಂಜೆ ಎಸ್ಪಿ ಕಚೇರಿ ಬಳಿ ಹಲ್ಲೆ ನಡೆದಿತ್ತು. ನೋಟ್ಸ್ ಜೆರಾಕ್ಸ್ ಮಾಡಿಸಲು ನಾನೇ ಡ್ರಾಪ್ ಕೇಳಿದ್ದೆ ಎಂದು ಹುಡುಗಿ ಎಷ್ಟೇ ಹೇಳಿದ್ರೂ ಯುವಕರ ಗುಂಪು ಕೇಳದೇ ಹಲ್ಲೆ ನಡೆಸಿದ್ದಾರೆ.