ಕಳ್ಳತನ ಆರೋಪ : ಮನನೊಂದು ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆಗೆ ಶರಣು

ಕಳ್ಳತನ ಆರೋಪ ಹೊರಿಸಿದ್ದಾರೆ ಎಂದು ಮನನೊಂದು ಸೆಲ್ಫಿ ವಿಡಿಯೋ ಮಾಡಿ ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಂಜೇಶ್ ಮೃತ ಸೆಕ್ಯೂರಿಟಿ ಗಾರ್ಡ್.
ನಂಜನಗೂಡಿನ ಮಹದೇವ ನಗರದ ನಿವಾಸಿ ಆಗಿರುವ ನಂಜೇಶ್, ಕಲ್ಮಲ್ಲಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿರುವ ಸೆಕ್ಯೂರಿಟಿ ಗಾರ್ಡ್ ರೆಹಾನ್ಸ್ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ಫ್ಯಾಕ್ಟರಿ ಆವರಣದಲ್ಲೇ ನೇಣಿಗೆ ಶರಣಾಗಿರುವ ನಂಜೇಶ್, ನಾನು ಮಾಡದ ತಪ್ಪಿಗೆ ನನ್ನನ್ನು ಹೊಣೆ ಮಾಡಿದ್ದಾರೆ. ಕೆಲಸ ಇಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತನಗಾದ ಕಿರುಕುಳ ಬಗ್ಗೆ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು, ಗೋವಿಂದರಾಜು ಮತ್ತು ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ.