ಮಾದಕ ವಸ್ತುಗಳನ್ನು (MDMA) ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ, 4.5 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶ

ದಿನಾಂಕ:೨೧/೦೫/೨೦೨೪ ರಂದು ಮಧ್ಯಾಹ್ನ ಸಮಯದಲ್ಲಿ ದಾವಣಗೆರೆ ನಗರ ಕೆ.ಆರ್. ರಸ್ತೆಯ ಎಲ್.ಐ.ಸಿ ಕಛೇರಿ ಹಿಂಭಾಗದ ಬಿ ಟಿ ಲೇ ಔಟ್‌ನ ೧ನೇ ಮೇನ್, ೪ನೇ ಕ್ರಾಸ್‌ನಲ್ಲಿರುವ ಪಾರ್ಕ್ ಗೇಟ್‌ನ ಮುಂಭಾಗದಲ್ಲಿ ಯಾರೋ ವ್ಯಕ್ತಿಯು ಮಾದಕ (MDMA) ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ, ಪೊಲೀಸ್ ಅಧೀಕ್ಷಕರು ದಾವಣಗೆರೆ ಆಜಾದ್ ನಗರ ಪೊಲೀಸ್ ಠಾಣೆಯ ಪಿ ಐ ಶ್ರೀ ಅಶ್ವಿನ್ ಕುಮಾರ್ ರವರ ನೇತೃತ್ವದಲ್ಲಿ ಡಿಸಿಆರ್‌ಬಿ ಘಟಕದ ಸಿಬ್ಬಂದಿಗಳನ್ನೋಳಗೊಂಡ ತಂಡವನ್ನು ರಚನೆ ಮಾಡಿ ದಾಳಿ ಮಾಡಲು ಸೂಚಿಸಿದ್ದರು.
ಸದರಿ ತಂಡವು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ವಿಜಯಕುಮಾರ್ ಎಂ ಸಂತೋಷ್, ಶ್ರೀ ಮಂಜುನಾಥ ಜಿ ರವರುಗಳು ಮತ್ತು ಶ್ರೀ ಮಲ್ಲೇಶ್ ದೊಡ್ಮನಿ, ಡಿವೈಎಸ್ಪಿ ನಗರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಸದರಿ ತಂಡವು ಪಂಚರು ಹಾಗೂ ಪೊಲೀಸ್ ಠಾಣೆಯ ಸಿಬ್ಬಂದಿಯವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿದ್ದು, ಪಾರ್ಕ್ನ ಗೇಟ್‌ನ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಕುಳಿತುಕೊಂಡಿದ್ದ ವ್ಯಕ್ತಿಯನ್ನು ಸುತ್ತುವರಿದು ಹಿಡಿದುಕೊಂಡು ವಿಚಾರಿಸಿದಾಗ ಸದರಿ ವ್ಯಕ್ತಿಯು ತಡವರಿಸುತ್ತಾ ನನಗೆ ಹಿಂದಿ ಮತ್ತು ಗುಜರಾತಿ ಭಾಷೆ ಮಾತ್ರ ಬರುತ್ತದೆ ಅಂತಾ ತಿಳಿಸಿದನು.
ಹಿಂದಿ ಭಾಷೆಯಲ್ಲಿ ಅಶೋಕ್ ಯಾನೆ ಅಶೋಕ್ ಕುಮಾರ ತಂದೆ ಪೂನಮ್ ರಾಮ್, 24 ವರ್ಷ, ಸ್ಟೀಲ್ ರೇಲಿಂಗ್ ಕೆಲಸ ಮಾಡುತ್ತಿದ್ದು, ರಾಮದಾಸ್ ಲೇ ಔಟ್, ಜವರೇ ಗೌಡ ನಗರ, ಬೆಂಗಳೂರು ದಕ್ಷಿಣ, ಬೆಂಗಳೂರಿನಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾನೆ, ಸ್ವಂತ ಊರು ಹಾಲಿವ್ ಗ್ರಾಮ, ಚಿತ್ತಲ್ ವಾಸ್ ತಾಲ್ಲೂಕು, ಸಾಂಚೂರು ಜಿಲ್ಲೆ, ರಾಜಸ್ಥಾನ ರಾಜ್ಯ ಎಂದು ತಿಳಿಸಿದ್ದಾನೆ.
ನಂತರ ಸದರಿ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ತಾನು ಮಾದಕ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಇಲ್ಲಿ ಕುಳಿತುಕೊಂಡಿರುತ್ತೇನೆಂದು ತಿಳಿಸಿದ್ದು, ನಂತರ ಪಂಚರುಗಳ ಸಮಕ್ಷಮದಲ್ಲಿ ಆರೋಪಿಯನ್ನು ಅಂಗಶೋದನೆ ಮಾಡಿದಾಗ ಸದರಿ ವ್ಯಕ್ತಿಯ ಬಳಿ ಇದ್ದ ವಸ್ತುಗಳನ್ನು ಪರಿಶೀಲಿಸಿ ನೋಡಿದಾಗ ೧) ಆಫೀಮ್ ಮೊಗ್ಗಿನ ಒಣಗಿದ ಪೌಡರ್ ಇದ್ದು, ಪ್ಲಾಸ್ಟಿಕ್ ಕವರ್ ಸಮೇತ್ ಸುಮಾರು ೩೫ ಗ್ರಾಂ ೨) MDMA Crystal 3 ಸಣ್ಣ ಪ್ಲಾಸ್ಟಿಕ್ ಕವರ್ ನಲ್ಲಿ ಗೋಧಿ ಬಣ್ಣದಂತೆ ಕಂಡು ಬಂದಿದ್ದು, ಪ್ಲಾಸ್ಟಿಕ್ ಕವರ್ ಸಮೇತ ಸುಮಾರು ೦೮ ಗ್ರಾಂ, ೩) Opium ಪೇಸ್ಟ್ ಪ್ಲಾಸ್ಟಿಕ್ ಕವರ್ ಸಮೇತ ಸುಮಾರು ೦೭ ಗ್ರಾಂ, ೪) MDMA Cystal ಬಿಳಿ ಬಣ್ಣದಂತೆ ಕಂಡು ಬರುವ ಪ್ಲಾಸ್ಟಿಕ್ ಕವರ್ ಸಮೇತ ಸುಮಾರು ೧೫ ಗ್ರಾಂ ಸದರಿ ಮಾದಕ ವಸ್ತುಗಳನ್ನು ತೂಕ ಮಾಡಲಾಗಿ ಒಟ್ಟು ತೂಕ 65 ಗ್ರಾಂ ಇದ್ದು, ಇವುಗಳ ಅಂದಾಜು ಬೆಲೆ 4.50,000/- ರೂಪಾಯಿಗಳು ಆಗಿರುತ್ತದೆ.
ಕಾನೂನು ಬಾಹಿರವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಅಶೋಕ್ ಯಾನೆ ಅಶೋಕ್ ಕುಮಾರ್ ವಿರುದ್ಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಗುನ್ನ ನಂ. ನಂ: ೮೦/೨೦೨೪ ಕಲಂ: ೧೭(ಃ), ೨೨ (ಛಿ) ೮(ಅ) ಓಆPS ಂಅಖಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಸದರಿ ದಾಳಿ ಸಮಯದಲ್ಲಿ ಭಾಗವಹಿಸಿದ್ದ ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಅಶ್ವಿನ್ ಕುಮಾರ್, ಪಿಎಸ್‌ಐ ಇಮ್ತಿಯಾಜ್, ಸಿಬ್ಬಂದಿಯವರಾದ ಡಿಸಿಆರ್‌ಬಿ ವಿಭಾಗದ ಮಜೀದ್, ರಮೇಶ್ ನಾಯ್ಕ್, ಕೆ.ಟಿ. ಆಂಜನೇಯ,ಬಾಲರಾಜ್, ಮಾಲತೇಶ್ ಕೆಳಗಿನಮನೆ, ಕೃಷ್ಣ ನಂದ್ಯಾಲ, ತಿಪ್ಪೇಸ್ವಾಮಿ, ನಾಗರಾಜ ಡಿ.ಬಿ ರವರನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಶ್ಲಾಘಿಸಿದ್ದಾರೆ.