ಹಳೇ ದ್ವೇಷದಿಂದ ಮಹಿಳೆ ಮೇಲೆ ಹಲ್ಲೆ ಮಾಡಿ ಮಾನಹಾನಿ, ಪ್ರಾಣ ಬೆದರಿಕೆ ಹಾಕಿದ ಪರಿಚಯಸ್ಥರು
ದಾವಣಗೆರೆ: ದಾವಣಗೆರೆಯ ನಿಟ್ಟುವಳ್ಳಿಯ ಕರಿಯಮ್ಮ ದೇವಸ್ಥಾನದ ಬಳಿ ಮಹಿಳೆಯ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆಯೊಡ್ಡಿದ ಘಟನೆ ನಡೆದಿದ್ದು ಕೆಟಿಜೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಶಿಕಲಾ ಎಂಬ ಮಹಿಳೆ ತನ್ನ ಗಂಡ ಮತ್ತು ಮಗುವಿನೊಂದಿಗೆ ನಿಟ್ಟುವಳ್ಳಿಯಲ್ಲಿ ವಾಸವಾಗಿದ್ದು, ದಿನಾಂಕ:01-10-2024 ರಂದು ಮಧ್ಯಾಹ್ನ ಸುಮಾರು 2:00 ಗಂಟೆ ಸಮಯದಲ್ಲಿ ಮನೆಯಲ್ಲಿದ್ದಾಗ ಮಹಿಳೆಗೆ ಪರಿಚಯವಿರುವ ಸುನೀಲ್, ರಘು, ಶಾಂತಬಾಯಿ, ಶಿಲ್ಪಾ ಮತ್ತು ಶಿಲ್ಪಾ ರವರ ತಾಯಿ ಇವರುಗಳು ಶಶಿಕಲಾರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದೂ ದೂರು ದಾಖಲಿಸಿದ್ದಾರೆ.
ಹಲ್ಲೆಗೊಳಗಾದ ಶಶಿಕಲಾ ದೂರಿನ ಸಾರಾಂಶ:
ರಘು ಈತನು ನನಗೆ ಹಳೆಯ ದ್ವೇಷದಿಂದ ಏಕಾಏಕಿ ನಮ್ಮ ನನ್ನ ಹೆಂಡತಿ ಯಾರೋ ಜೊತೆ ಹೋಗಿದ್ದಾಳೆ ಇದನ್ನು ನೀನು ನಮ್ಮ ಅಕ್ಕಪಕ್ಕದ ಮನೆಯವರಿಗೆ ಮತ್ತು ಬೀದಿಯ ಜನರಿಗೆ ಇಲ್ಲ ಸಲ್ಲದ ವಿಚಾರನ್ನು ಪ್ರಚಾರ ಮಾಡುತ್ತೀಯ ಎಂದು ಅವಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಕೈಯಿಂದ ಹೊಡೆದು ನನ್ನ ಮೈಮೇಲಿನ ಬಟ್ಟೆ ಹಿಡಿದು ಎಳೆದಾಡಿ ಸುನೀಲ ಈತನು ತನ್ನ ಬಳಿಯಿದ್ದ ಚಾಕುವಿನಿಂದ ನನ್ನ ಬಲಗೈಗೆ ಹಲ್ಲೆ ಮಾಡಿ ರಕ್ತಗಾಯ ಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇವಳನ್ನು ಬಿಡುವುದು ಬೇಡ ಇಲ್ಲಿಯೇ ಜೀವ ತೆಗೆದುಬಿಡೋಣ ಅಂತಾ ಪ್ರಾಣ ಬೆದರಿಕೆ ಹಾಕಿ ಗಲಾಟೆ ಮಾಡುತ್ತಿದ್ದಾಗ ನಮ್ಮ ಮನೆಯ ಅಕ್ಕ ಪಕ್ಕದ ಜನರು ಮನೆಯ ಬಳಿ ಬಂದಾಗ ಎಲ್ಲರೂ ಮನೆಯಿಂದ ಓಡಿ ಹೋದರು. ಗಲಾಟೆಯಲ್ಲಿ ನನ್ನ ಕೊರಳಲ್ಲಿದ್ದ ಬಂಗಾರದ ಸರ ಬಿದ್ದು ಹೋಗಿರುತ್ತದೆ. ನಾನು ಸುದಾರಿಸಿಕೊಂಡು ಚಿಕ್ಕ ಪಕ್ಕದ ಮನೆಯವರ ಸಹಾಯದಿಂದ ದಾವಣಗೆರೆ ಸಿ.ಜಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದೆನೆ.
ನಂತರ ಸುಧಾರಿಸಿಕೊಂಡು ಠಾಣೆಗೆ ಬಂದು ನನ್ನ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿ ನನ್ನ ಮಾನಹಾನಿ ಮಾಡಿ ಪ್ರಾಣಬೆದರಿಕೆ ಹಾಕಿ ಗಲಾಟೆ ಮಾಡಿದ ಸುನೀಲ, ರಘು, ಶಾಂತಬಾಯಿ, ಶಿಲ್ಪಾ, ಶಿಲ್ಪಾಳ ತಾಯಿ(ಹೆಸರುಗೊತ್ತಿರುವುದಿಲ್ಲ) ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು ಪೋಲೀಸರು ಎಫ್ ಐ ಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.