ಸಿಂಧಗಿ ಅಕ್ರಮ ಮರಳು ದಂಧೆ ಪತ್ರಕರ್ತನಿಗೆ ಸೂಕ್ತ ರಕ್ಷಣೆ, ಘಟನೆ ಬಗ್ಗೆ ತನಿಖೆ: ಎಸ್ಪಿ ಭರವಸೆ ಸಿಎಂ ಮಾಧ್ಯಮ ಸಲಹೆಗಾರರನ್ನು ಭೇಟಿಯಾದ ಕೆಯುಡಬ್ಲೂೃಜೆ

ಬೆಂಗಳೂರು:ಅಕ್ರಮ ಮರಳುಗಾರಿಕೆ ಬಗ್ಗೆ ವರದಿ ಮಾಡಿದ್ದ ಸಿಂದಗಿ ಪತ್ರಕರ್ತ ಗುಂಡು ಕುಲಕರ್ಣಿ ಅವರಿಗೆ ಸಿಂದಗಿ ಪೊಲೀಸ್ ಠಾಣೆಯ ಸರ್ಕಲ್ ಇನ್‌ಪೆಕ್ಟರ್ ಮತ್ತು ಸಬ್ ಇನ್‌ಪೆಕ್ಟರ್ ಅವರು ಬೆದರಿಕೆ ಹಾಕಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ತಿಳಿಸಿದ್ದಾರೆ.


ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗವು ಪತ್ರಕರ್ತ ಗುಂಡು ಕುಲಕರ್ಣಿ ಅವರ ಜೊತೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರನ್ನು ಭೇಟಿ ಮಾಡಿ ಅಲ್ಲಿ ನಡೆದಿರುವ ಘಟನಾವಳಿಗಳನ್ನು ವಿವರಿಸಿತು.


ಕೂಡಲೇ ಕೆ.ವಿ.ಪ್ರಭಾಕರ್ ಅವರು ವಿಜಯಪುರ ಎಸ್ಪಿಗೆ ಪೋನಾಯಿಸಿ, ಪತ್ರಕರ್ತನಿಗೆ ಬೆದರಿಕೆ ಹಾಕಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕ್ಕೆ ತಿಳಿಸಿದರು. ಈ ಕೂಡಲೇ ಡಿವೈಎಸ್ಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಪರಿಶೀಲನೆ ಮಾಡಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ಎಸ್ಪಿ ನೀಡಿದರು.


ಭೀಮಾತೀರದ ಮರಳು ಅಕ್ರಮ ದಂಧೆ ಬಗ್ಗೆ ವರದಿ ಮಾಡಿದ ಪತ್ರಕರ್ತ ಗುಂಡು ಕುಲಕರ್ಣಿ ಅವರಿಗೆ ಸಿಂಧಗಿಯ ಪೊಲೀಸ್ ಇನ್‌ ಸ್ಪೆಕ್ಟರ್ ಮತ್ತು ಸಬ್ ಇನ್ ಸ್ಪೆಕ್ಟರ್ ಬೆದರಿಕೆ ಹಾಕುವ ಮೂಲಕ ಮಾಧ್ಯಮ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನ ಮಾಡಿರುವುದು ಖಂಡನೀಯ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ಇಬ್ಬರು ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಪತ್ರಕರ್ತನಿಗೆ ರಕ್ಷಣೆ ನೀಡಬೇಕು ಎಂದು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು

Leave a Reply

Your email address will not be published. Required fields are marked *

error: Content is protected !!