ಆಹಾರದಲ್ಲಿ ಟೇಸ್ಟಿಂಗ್ ಪೌಡರ್ ಮಿಶ್ರಣ ಕಂಡುಬಂದಲ್ಲಿ ಪಾಲಿಕೆಗೆ ದೂರು ನೀಡಲು ಸಲಹೆ

ದಾವಣಗೆರೆ : ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಹಲವು ಹೋಟೆಲ್ಗಳಲ್ಲಿ ಅಕ್ರಮವಾಗಿ ಟೇಸ್ಟಿಂಗ್ ಪೌಡರ್ ಉಪಯೋಗಿಸಿ ಜನತೆಗೆ ಆಹಾರ ವಿತರಿಸುತ್ತಿದ್ದಾರೆ.
ಹಾನಿಕಾರಕ ಟೇಸ್ಟಿಂಗ್ ಪೌಡರ್ ಮಿಶ್ರಿತ ಆಹಾರ ನೀಡುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಕರೋನಾದಂತಹ ಮಹಾಮಾರಿಯಿಂದ ಹೊರಬಂದ ಜನತೆಗೆ ಅರಗಿಸಿಕೊಳ್ಳಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಹೋಟೆಲ್/ಬೀದಿಬದಿ ತಿಂಡಿ ಅಂಗಡಿಗಳಲ್ಲಿ ಟೇಸ್ಟಿಂಗ್ ಪೌಡರ್ ಉಪಯೋಗಿಸುತ್ತಿರುವುದು ಕಂಡಬಂದಲ್ಲಿ ಹಾಗೂ ಆಹಾರದಲ್ಲಿ ಟೇಸ್ಟಿಂಗ್ ಮಿಶ್ರಿತವಾಗಿರುವುದು ಕಂಡುಬಂದಲ್ಲಿ ಛಾಯಾ ಚಿತ್ರದೊಂದಿಗೆ ಪಾಲಿಕೆಗೆ ದೂರು ಸಲ್ಲಿಸಿ ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
                         
                       
                       
                       
                       
                       
                       
                      