ಜಿಎಂಎಸ್ ಫಸ್ಟ್ ಗ್ರೇಡ್ ಕಾಲೇಜ್, ಐಸಿಟಿ ಅಕ್ಯಾಡೆಮಿ ಜೊತೆ ಒಡಂಬಡಿಕೆ
ಇತ್ತೀಚಿಗೆ ನಡೆದ ಬೆಳವಣಿಗೆಯಲ್ಲಿ ದಾವಣಗೆರೆಯ ಜಿಎಂಎಸ್ ಫಸ್ಟ್ ಗ್ರೇಡ್ ಡಿಗ್ರಿ ಕಾಲೇಜ್, ಐಸಿಟಿ ಅಕ್ಯಾಡೆಮಿಯ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ. ಐಸಿಟಿ ಅಕ್ಯಾಡೆಮಿಯು ಲಾಭರಹಿತ ಸಂಸ್ಥೆಯಾಗಿದ್ದು, ಭಾರತ ಸರ್ಕಾರದ ಅಡಿಯಲ್ಲಿ ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕೆಗಳ ಸಹಯೋಗದಲ್ಲಿ ನಡೆಯುತ್ತಿರುವ ಸಂಸ್ಥೆಯಾಗಿದ್ದು ಮತ್ತು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಜಂಟಿ ಉದ್ಯಮವಾಗಿದೆ.
ಈ ಒಡಂಬಡಿಕೆ ಯಿಂದ ಹಲವಾರು ಚಟುವಟಿಕೆಗಳನ್ನು ಹಮ್ಮಿ ಕೊಳ್ಳಲಿದ್ದು, ವಿದ್ಯಾರ್ಥಿಗಳ ಮತ್ತು ಪ್ರಾಧ್ಯಾಪಕರುಗಳ ಏಳಿಗೆಗೆ ಸಹಕಾರಿ ಯಾಗಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ವೇತಾ ಮರಿಗೌಡರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಒಡಂಬಡಿಕೆ ಯಿಂದ ವಿದ್ಯಾರ್ಥಿಗಳಿಗೆ ಬೇಕಾದ ಕೌಶಲ್ಯ ಅಭಿವೃದ್ಧಿ, ಕೈಗಾರಿಕಾ ನೈಪುಣ್ಯತೆ ಮತ್ತು ಸಂದರ್ಶನ ಪ್ರಕ್ರಿಯೆ ಎದುರಿಸುವ ಬಗ್ಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಇದೇ ವೇಳೆ ತಿಳಿಸಿದರು.
ಐಸಿಟಿ ಅಕ್ಯಾಡೆಮಿಯಿಂದ ವಿದ್ಯಾರ್ಥಿಗಳಿಗೆ ಕಂಪನಿಗಳ ಸಂದರ್ಶನ ಅವಕಾಶಗಳಲ್ಲದೇ, ವಿವಿಧ ಪ್ರತಿಷ್ಠಿತ ಕಂಪನಿಗಳ ಸೆಂಟರ್ ಆಫ್ ಎಕ್ಸಲೆನ್ಸ್ ಕೂಡ ದೊರೆಯುವುದು ಎಂದು ತಿಳಿಸಿದರು.
ಒಡಂಬಡಿಕೆಯ ಸಮಯದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ವೇತಾ ಮರಿಗೌಡರ್, ಐಸಿಟಿ ಅಕ್ಯಾಡೆಮಿ ವತಿಯಿಂದ ಆಗಮಿಸಿದ್ದ ದಾವಣಗೆರೆ ವಿಭಾಗದ ಸಂಯೋಜಕರಾದ ಶ್ರೀ ಜಕಾವುಲ್ಲಾ, ಕಾಲೇಜಿನ ಐಸಿಟಿ ಅಕಾಡೆಮಿ ಸಂಯೋಜಕರಾದ ಶ್ರೀ ಶಾಂತಕುಮಾರ್, ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ಪ್ಲೇಸ್ಮೆಂಟ್ ಸಂಯೋಜಕರಾದ ನಾಗರಾಜ್ ಸಿ ಟಿ ಉಪಸ್ಥಿತರಿದ್ದರು.