ಕೃಷಿ ವಿಚಕ್ಷಣಾ ದಳದ ಕಾರ್ಯಾಚರಣೆ:14 ಲಕ್ಷ ಮೌಲ್ಯದ ನಕಲಿ ಬಿತ್ತನೆ ಬೀಜ, ಗೊಬ್ಬರ ವಶ

agriculture ada raid duplicate seeds fertilizer seizure garudavoice

 

ಗಂಗಾವತಿ: ಗಂಗಾವತಿ ತಾಲೂಕಿನ ಗಂಗಾವತಿ ನಗರ ಮಲ್ಲಿಕಾರ್ಜುನ ಸೀಡ್ ಸೆಂಟರ್ ಮೇಲೆ ದಾಳಿ, ಕೃಷಿ ಜಾಗೃತ ದಳದದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಪರವಾನಿಗೆಯಿಲ್ಲದೇ ಅನಧಿಕೃತ ದಾಸ್ತಾನು ಮಾಡಿದ್ದ ಬಿತ್ತನೆ ಬೀಜವನ್ನು ವಶಕ್ಕೆ ಪಡೆಯಲಾಗಿದೆ.

58 ಕ್ವಿಂಟಾಲ್ ತೊಗರಿ, ಸಜ್ಜೆ ,ಮೆಕ್ಕೆಜೋಳ ಸೇರಿದಂತೆ ಒಟ್ಟು ಸುಮಾರು 14 ಲಕ್ಷ ಬೆಲೆ ಬಾಳುವ ಬಿತ್ತನೆ ಬೀಜ, ಗೊಬ್ಬರವನ್ನ ಕೃಷಿ ವಿಚಕ್ಷಣಾ ದಳದಿಂದ ಕಾರ್ಯಾಚರಣೆ ಮಾಡಿ ವಶಕ್ಕೆ ಪಡಿಯಲಾಗಿದೆ.ಕೊಪ್ಪಳ ಜಿಲ್ಲೆಯ ಎಡಿಎ ನಿಂಗಪ್ಪ ನೇತೃತ್ವದಲಿ ಕೃಷಿ ಜಾಗೃತ ಕೋಶದಿಂದ ಈ ದಾಳಿ ಮುಂದುವರೆದಿದೆ.

ನಕಲಿ ಬಿತ್ತನೆ ಬೀಜ, ಗೊಬ್ಬರ ಮಾರಾಟಗಾರರ ಮೇಲೆ ನಿರಂತರವಾಗಿ ದಾಳಿ ಮಾಡಿ ನಕಲಿ ಬಿಜ ಗೊಬ್ಬರ ಮಾರಾಟಗಾರರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ. ಕೃಷಿ ಸಚಿವ ಬಿ‌.ಸಿ.ಪಾಟೀಲ್ ಸೂಚನೆ ಮೇರೆಗೆ ಕೊಪ್ಪಳ, ಎಡಿಎ ನಿಂಗಪ್ಪ ನೇತೃತ್ವದಲ್ಲಿ ಕೃಷಿ ಜಾಗೃತ ಕೋಶದ ದಾಳಿ ನಡೆದಿದೆ.

Leave a Reply

Your email address will not be published. Required fields are marked *

error: Content is protected !!