ದಾವಣಗೆರೆಯಲ್ಲಿ ನಾಳೆ ಆಷಾಢ ಮಾಸದ ಅಜ್ಜಿ ಹಬ್ಬ

 ದಾವಣಗೆರೆಯಲ್ಲಿ ನಾಳೆ ಆಷಾಢ ಮಾಸದ ಅಜ್ಜಿ ಹಬ್ಬ

ದಾವಣಗೆರೆ : ದಾವಣಗೆರೆ ನಗರದ ನಿಟ್ಟುವಳ್ಳಿ ದುರ್ಗಾಂಭಿಕಾ ದೇವಸ್ಥಾನದ  ಸುತ್ತ ಮುತ್ತಲಿನ ಪ್ರದೇಶದಲ್ಲಿ  ಆಷಾಢ ಮಾಸದ ಕೊನೆಯ ಶುಕ್ರವಾರವಾದ ನಾಳೆ ಅಂದರೆ ದಿ. 14-07-2023 ರಂದು ಅಜ್ಜಿ ಹಬ್ಬವನ್ನು ಆಚರಿಸಲಾಗುತ್ತದೆ.  ಎಂದು ದೇವಸ್ಥಾನದ ಆಡಳಿತ ಮಂಡಳಿ ಸಾರ್ವಜನಿಕರಿಗೆ ಧ್ವನಿ ವರ್ಧಕದ ಮೂಲಕ ತಿಳಿಯಪಡಿಸಿದ್ದಾರೆ. ಈ ಹಬ್ಬಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ಹೆಸರುಗಳಿಂದ  ಕರೆಯಲಾಗುತ್ತದೆ.  ಆಷಾಢದಮ್ಮ, ಹೋಳಿಗೆಮ್ಮ , ಅಜ್ಜಿ ಹಬ್ಬ ಎಂದೂ ಕರೆಯಲಾಗುತ್ತದೆ.

 ನಿಟ್ಟುವಳ್ಳಿ ದುರುಗಮ್ಮ ದೇವಿ

ಆಷಾಢ ಮಾಸದಲ್ಲಿ  ಬರುವ ನಾಲ್ಕು ಶುಕ್ರವಾರಗಳ ನಂತರ ಐದನೇ ಶುಕ್ರವಾರ  ಅಜ್ಜಿ ಹಬ್ಬ ವನ್ನು ಆಚರಿಸಲಾಗುತ್ತದೆ.  ಅಜ್ಜಿ ಹಬ್ಬವನ್ನು   ಚಿಕ್ಕ ಮಕ್ಕಳ ಮೈಮೇಲೆ ಗುಳ್ಳೆಗಳು (ದಡಾರ)  ಜ್ವರ ,  ಅಥವಾ ಅಮ್ಮಾ ಬಂದಿದ್ದರೆ ಅವುಗಳನ್ನು ದೂರ ಮಾಡುವ ಸಲುವಾಗಿ  ಈ ಆಚರಣೆ ಮಾಡಲಾವಗುವುದು ಎಂಬ ವಾಡಿಕೆಯಿದೆ.

 ದಾವಣಗೆರೆಯಲ್ಲಿ ನಾಳೆ ಆಷಾಢ ಮಾಸದ ಅಜ್ಜಿ ಹಬ್ಬ

ಈ ಹಬ್ಬಕ್ಕೆ ತನ್ನದೇ ಆದ ಕೆಲ  ಧಾರ್ಮಿಕ ಆಚರಣೆಗಳೂ ಸಹ ಇದೆ. ಅದರಂತೆಯೇ ಹಬ್ಬವನ್ನು ಮಾಡಲಾಗುವುದು. ಸಣ್ಣ ಮಕ್ಕಳಿಗೆಯಾವುದೇ ರೋಗ ರುಜಿನಗಳು  ಬಾರದೇ ಇರಲಿ, ದೇವಿ ಇದನ್ನು ತಪ್ಪಿಸಲಿ ಎಂದು ಈ ಅಜ್ಜಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ .

 

 

Leave a Reply

Your email address will not be published. Required fields are marked *

error: Content is protected !!