ಬೆಣ್ಣೆ ನಗರಿಯಲ್ಲಿ ಅಕ್ಷರ ದೋಸೋತ್ಸವ ದೋಸಾ ಕಾವಲಿಯಲ್ಲಿ ಮೂಡಿದ ಮತದಾನ ಜಾಗೃತಿ
ದಾವಣಗೆರೆ; ದಾವಣಗೆರೆ ಬೆಣ್ಣೆ ನಗರಿ, ಬೆಣ್ಣೆ ದೋಸೆ ಎಂದೇ ಬ್ರಾಂಡ್ ಪಡೆದುಕೊಂಡಿದೆ. ದೋಸೆ ಕಾವಲಿಯಲ್ಲಿ ದೋಸೆಯ ಹಿಟ್ಟನ್ನು ಬಳಸಿ ನಮ್ಮ ಮತ, ನನ್ನ ಹಕ್ಕು, ತಪ್ಪದೇ ಮೇ 7 ರಂದು ಮತದಾನ ಮಾಡಿ ಎಂಬ ಘೋಷಣೆಯನ್ನು ಕಾವಲಿಯಲ್ಲಿ ದೋಸೆಯಲ್ಲಿ ಮೂಡಿ ಬಂದಿತು.
ಗುರುವಾರ ಜಯದೇವ ವೃತ್ತದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಸ್ವೀಪ್ ಸಮಿತಿಯಿಂದ ಏರ್ಪಡಿಸಲಾದ ದೋಸೆಯ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಅವರು ನನ್ನ ಮತ, ನನ್ನ ಹಕ್ಕು ಮತ್ತು ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ಮೈ ವೋಟ್, ಮೈ ವಾಯ್ಸ್ ಮೇ7 ಎಂದು ದೋಸೆ ಹಿಟ್ಟಿನಲ್ಲಿ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದರು.
ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಮಾತನಾಡಿ ಅಕ್ಷರ ದೋಸೋತ್ಸವದ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರದಲ್ಲಿ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತದಾನವಾಗಬೇಕೆಂಬ ಗುರಿ ನಮ್ಮದಾಗಿದೆ ಎಂದರು.
ಈ ವೇಳೆ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ; ಚಂದ್ರಶೇಖರ್ ಸುಂಕದ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಮಠದ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.