ಮುರುಘಾ ಶರಣರಿಂದ ಪ್ರಶಸ್ತಿ ಪಡೆದವರೆಲ್ಲಾ ಪ್ರಶಸ್ತಿಗಳನ್ನು ಮರಳಿ ಮಠಕ್ಕೆ ನೀಡಲು ನೈಜ ಹೋರಾಟಗಾರರ ವೇದಿಕೆ ಒತ್ತಾಯ

ದಾವಣಗೆರೆ: ಕರ್ನಾಟಕ ರಾಜ್ಯದ ಪ್ರಭಾವಿ ಮುರಘ ರಾಜೇಂದ್ರ ಬೃಹನ್ ಮಠ ಚಿತ್ರದುರ್ಗ ಇದರ ಪೀಠಾಧ್ಯಕ್ಷರಾದ ಡಾಕ್ಟರ್ ಶಿವಮೂರ್ತಿ ಮುರುುಘಾ ಶರಣರ ಮೇಲೆ ಗಂಭೀರ ಪ್ರಕರಣ ಪೋಕ್ಸೋ ಕಾಯ್ದೆ ದಾಖಲಾಗಿ ಮೂರು ದಿನಗಳು ಕಳೆದಿವೆ.
ಕರ್ನಾಟಕ ರಾಜ್ಯ ಪೊಲೀಸ್ ಬಗ್ಗೆ ಒಂದು ಒಳ್ಳೆಯ ಮಾತಿದೆ. *ದೇಶದಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸುವ ಪೊಲೀಸ ಇಲಾಖೆ ಕರ್ನಾಟಕ ರಾಜ್ಯದಲ್ಲಿದೆ ಎಂದು* ನಮಗೆಲ್ಲ ಹೆಮ್ಮೆಯ ವಿಚಾರವಾಗಿತ್ತು.
ಆದರೆ ಇತ್ತೀಚಿಗೆ ಆಡಳಿತ ಪಕ್ಷದ ಸಚಿವರ ವಿರುದ್ಧ ಅತ್ಯಾಚಾರ ಪ್ರಕರಣ ಮತ್ತು ಕಾಮಗಾರಿಗಳಲ್ಲಿ 40% ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಇಬ್ಬರು ಸಚಿವರು ರಾಜೀನಾಮೆ ನೀಡಿದಾಗ ಕರ್ನಾಟಕ ರಾಜ್ಯ ಪೊಲೀಸರ ಕಾರ್ಯಕ್ಷಮತೆ ನಾವು ನೋಡಿ ದಂಗಾಗಿ ಹೋಗಿದ್ದೆವು.
ಆರೋಪಿಗಳ ರಕ್ಷಣೆಗೆ ಬೆನ್ನಿಗೆ ನಿಂತ ಈ ಪೊಲೀಸ್ ಪಡೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಎಲ್ಲಾ ಆಕ್ರೋಶಗಳ ನಡುವೆ ಇನ್ನಾದರೂ ಕರ್ನಾಟಕ ರಾಜ್ಯ ಪೊಲೀಸರು ತಮ್ಮ ಕರ್ತವ್ಯ ಮತ್ತು ಖಾಕಿ ಬಟ್ಟೆಗೆ ಗೌರವ, ಘನತೆಯನ್ನು ಕೊಡುತ್ತಾರೆ ಎಂಬ ಆಶಾಭಾವನೆಯಲ್ಲಿ ನಾವಿದ್ದೆವು. ಆದರೆ ಈಗ ಪೋಕ್ಸೋ ಕಾಯ್ದೆಯನ್ನು ಡಾ ಶಿವಮೂರ್ತಿ ಮುರಘಾ ಶರಣರ ಮೇಲೆ ದಾಖಲಾದ ಸಂದರ್ಭದಲ್ಲಿ ಆರೋಪಿಯ ಸ್ಥಾನದಲ್ಲಿರುವ ಸ್ವಾಮೀಜಿಗೆ ರಕ್ಷಣೆಯನ್ನು ನೀಡಿ ಪೋಕ್ಸೋ ಕಾಯ್ದೆಯ ನಿಯಮಗಳು ಮತ್ತು ಕಾನೂನುಗಳನ್ನು ಹಾಗೂ ಭಾರತ ಸರ್ಕಾರದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ಹಿಂದುಳಿದ ವರ್ಗದ ಅದರಲ್ಲೂ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ನ್ಯಾಯ ಕೊಡಿಸುವಲ್ಲಿ ಇಡೀ ಪೊಲೀಸ್ ವ್ಯವಸ್ಥೆ ನಿಷ್ಕ್ರಿಯವಾಗಿರುವುದು ಖೇದಕರ ಸಂಗತಿಯಾಗಿದೆ.
ಈ ಪೊಲೀಸರ ಬೆನ್ನಿಗೆ ಸಮಾಜದ ಗಣ್ಯಾತಿ ಗಣ್ಯರು ಆಡಳಿತ ನಡೆಸುವ ರಾಜಕಾರಣಿಗಳು ತೆರೆಮರೆಯಲ್ಲಿ ಪ್ರಭಾವ ಬೀರುತ್ತಿರುವುದು ಸಾರ್ವಜನಿಕರಿಗೆ ಅರ್ಥವಾಗಿರುವುದಿಲ್ಲವೆಂದೇ ಭಾವಿಸಿದ್ದಾರೆ.
ಚಿತ್ರದುರ್ಗ ಬೃಹನ್ ಮಠವು ನಡೆಸುವ “ಶರಣ ಸಂಸ್ಕೃತಿ ಉತ್ಸವ” ದಲ್ಲಿ ರಾಜಕೀಯ ಪಕ್ಷದ ನಾಯಕರುಗಳಿಗೆ ಅದರಲ್ಲಿ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ, ಹಾಲಿ ಮುಖ್ಯಮಂತ್ರಿಗಳಿಗೆ “ಬಸವಶ್ರೀ” ಮತ್ತು “ಬಸವಭೂಷಣ” ಪ್ರಶಸ್ತಿಗಳನ್ನು ನೀಡಿ ಗೌರವಿಸಿರುವುದು ನಾವು ನೋಡಿದ್ದೇವೆ.
ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಎದುರಿಸುತ್ತಿರುವ ಸ್ವಾಮೀಜಿಗಳ ಕೈಯಿಂದ ಪ್ರಶಸ್ತಿ ಪಡೆದ ಎಲ್ಲರೂ ತಮ್ಮ ಪ್ರಶಸ್ತಿಗಳನ್ನು ಮರಳಿ ಮಠಕ್ಕೆ ನೀಡುವ ಬಗ್ಗೆ ನಾವು ಒತ್ತಾಯವನ್ನು ಮಾಡುತ್ತಿದ್ದೇವೆ.
ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವನ ನಿರ್ವಹಿಸುವ ವಿದ್ಯಾರ್ಥಿನಿಯರು ತಮ್ಮ ಭವಿಷ್ಯಕ್ಕಾಗಿ ಜ್ಞಾನಾರ್ಜನೆ ಮತ್ತು ವಿದ್ಯಾರ್ಹತೆಯನ್ನು ಪಡೆದುಕೊಳ್ಳಲು ಮಠಕ್ಕೆ ಬಂದು ಸ್ವಾಮೀಜಿಯವರನ್ನೇ ತಮ್ಮ ತಂದೆ ಎಂದು ಭಾವಿಸಿ ಅಪ್ಪಾಜಿ ಎಂದು ಕರೆಯುತ್ತಿರುವ ಸಂದರ್ಭದಲ್ಲಿ ಆ ವಿದ್ಯಾರ್ಥಿನಿಯರ ಮೇಲೆ ಮೃಗೀಯವಾಗಿ ಲೈಂಗಿಕ ದೌರ್ಜನ್ಯವಾಗಿದೆ ಎಂದು ವಿದ್ಯಾರ್ಥಿನಿಯರೇ , ಮೈಸೂರಿನ ಒಡನಾಡಿ ಸಂಸ್ಥೆಯ ಮುಂದೆ ಸ್ವತಃ ಹೇಳುತ್ತಿರುವಾಗ ನಾಗರಿಕ ಸಮಾಜ ಮಕ್ಕಳನ್ನು ನಂಬಲೇ ಬೇಕಾಗುತ್ತದೆ.
ಇಂಥ ಹೀನಾಯ ಕೃತ್ಯ ವ್ಯಸಗಿದ ಆರೋಪದಲ್ಲಿರುವ ಸ್ವಾಮೀಜಿ ಅವರಿಂದ ಪಡೆದ ಪ್ರಶಸ್ತಿಗಳನ್ನು ರಾಜಕಾರಣಿಗಳು ಐಪಿಎಸ್, ಐಎಎಸ್ ಅಧಿಕಾರಿಗಳು ಇನ್ನಿತರ ಕ್ಷೇತ್ರದ ಗಣ್ಯರು ಪ್ರಶಸ್ತಿ ಪಡೆದವರು ತಕ್ಷಣ ಪ್ರಶಸ್ತಿಗಳನ್ನು ಮಠಕ್ಕೆ ಮರಳಿಸಬೇಕಾಗಿ ವಿನಯ ಪೂರ್ವಕ ಆಗ್ರಹವನ್ನು ನಾವು ಮಾಡುತ್ತಿದ್ದೇನೆ.
ಬಹಳ ಮುಖ್ಯವಾಗಿ *ಭೇಟಿ ಪಡಾವೋ ಭೇಟಿ ಬಚಾವೋ* ಎಂಬ ನಮ್ಮ ಹೆಮ್ಮೆಯ ಪ್ರಧಾನಿಗಳ ಘೋಷಣೆಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ನಮ್ಮ ಆಡಳಿತ ವ್ಯವಸ್ಥೆ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ಅದರಲ್ಲೂ ಬಹಳ ಮುಖ್ಯವಾಗಿ ಪೊಲೀಸ ಇಲಾಖೆಯ ಅಧಿಕಾರಿಗಳು ಆತ್ಮ ವಂಚನೆ ಮಾಡಿ ಕರ್ತವ್ಯ ನಿರ್ವಹಿಸುತ್ತಿರುವುದು ನೋಡಿದರೆ ಅವರೆಲ್ಲ ನಡೆದಾಡುವ ಜೀವಂತ ಶವಗಳಾಗಿ ನಮ್ಮ ಕಣ್ಣಿಗೆ ಕಾಣುತ್ತಾರೆ.
ಈಗಲಾದರೂ ನಮ್ಮ ಮಾನ್ಯ ಮುಖ್ಯಮಂತ್ರಿಗಳು, ಗೃಹ ಸಚಿವರು, ಪೊಲೀಸ್ ಮಹಾ ನಿರ್ದೇಶಕರು ಮತ್ತು ಚಿತ್ರದುರ್ಗದ ಗ್ರಾಮಾಂತರ ಠಾಣೆಯ ಪ್ರಕರಣವನ್ನು ತನಿಖೆ ಮಾಡುವ ತನಿಕಾಧಿಕಾರಿಗಳು ಆತ್ಮ ವಿಮರ್ಶೆ ಮಾಡಿಕೊಂಡು ನಮ್ಮ ಮನೆಯ ಹೆಣ್ಣು ಮಗಳಿಗೆ ಇಂತಹ ಪರಿಸ್ಥಿತಿ ಬಂದಿದೆ ಎಂಬ ಭಾವನೆಯಿಂದ ಈ ವಿದ್ಯಾರ್ಥಿನಿಯರಿಗೆ ನ್ಯಾಯ ಕೊಡಿಸುತ್ತಾರೆಂಬ ಆಶಾಭಾವನೆ ಯೊಂದಿಗೆ ಈ ಒಂದು ಪತ್ರಿಕಾ ಪ್ರಕಟಣೆಯನ್ನು ನೀಡುತ್ತಿದ್ದೇವೆ.
*ಒಳ್ಳೆಯದನ್ನೇ ಮಾಡಿ ಮಾಡುತ್ತಲೇ ಇರಿ*
ಹೆಚ್. ಎಂ. ವೆಂಕಟೇಶ್
ಎಚ್.ಜಿ. ರಮೇಶ್
ಪ್ರದೀಪ್ ಮೆಂಡೋನ್ಸ್
ಹಂದ್ರಾಳು ನಾಗಭೂಷಣ್
ಸಿ.ಪಿ. ತಿಪ್ಪೇಸ್ವಾಮಿ
ಸಾಮಾಜಿಕ ಕಾರ್ಯಕರ್ತರು & ಹೋರಾಟಗಾರರು
*ನೈಜ ಹೋರಾಟಗಾರರ ವೇದಿಕೆ*
