ಪೊಲೀಸರನ್ನು ನಾಯಿಗೆ ಹೋಲಿಸಿರುವ ಆರೋಪ.! ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕೇಸ್ ದಾಖಲು

ಚಿಕ್ಕಮಗಳೂರು: ಪೊಲೀಸರನ್ನು ನಾಯಿಗೆ ಹೋಲಿಸಿ ಮಾತನಾಡಿದ್ದ ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ರೈತ ಸಂಘ ಹಾಗೂ ಹಸಿರು ಸೇನೆಯಿಂದ ದೂರು ದಾಖಲು ಮಾಡಿದ್ದು, ಗೃಹ ಸಚಿವರ ಹೇಳಿಕೆಯಿಂದ ಸಾರ್ವಜನಿ ಪೊಲೀಸರ ಮೇಲೆ ಗೌರವ ಕಡಿಮೆಯಾಗುತ್ತದೆ. ಸಮಾಜದ ಶಾಂತಿ, ಮಕ್ಕಳು-ಮಹಿಳೆಯರ ರಕ್ಷಣೆಯಲ್ಲಿ ಪೊಲೀಸರದ್ದು ಪ್ರಮುಖ ಪಾತ್ರ. ಹಗಲಿರುಳೆನ್ನದೇ ಪೊಲೀಸರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಾರೆ. ಅಂತಹ ಪೊಲೀಸರನ್ನು ನಾಯಿಗೆ ಹೋಲಿಸಿರುವುದು ಖಂಡನೀಯ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರೈತ ಮುಖಂಡ ನವೀನ್ ಕುರುವಾನೆ ಎಂಬುವರಿಂದ ದೂರು ದಾಖಲು ಮಾಡಲಾಗಿದ್ದು, ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.