Allergy – Asthama : ಅಲರ್ಜಿ-ಅಸ್ತಮಾ ರೋಗಿಗಳಿಗೆ ವಿಶೇಷ ಔಷಧಿ ವಿತರಣೆ

ದಾವಣಗೆರೆ: Allergy – Asthama : ಸುಶ್ರುತ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಶ್ರೀರಾಮನಗರ, ದಾವಣಗೆರೆಯಲ್ಲಿ ಅಲರ್ಜಿ ಮತ್ತು ಅಸ್ತಮಾ ರೋಗಿಗಳಿಗೆ ವಿಷೇಷ ಔಷಧಿ ವಿತರಣೆ ಮಾಡಲಾಗುತ್ತಿದೆ.
ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ನೆಗಡಿಯ ನಂತರ ಬಹಳಷ್ಟು ಜನರಲ್ಲಿ ಕಂಡು ಬರುವ ತೊಂದರೆ ಅಸ್ತಮಾ, ಕೆಮ್ಮು, ಕಷ್ಟಕರ ಉಸಿರಾಟ ಇತ್ಯಾದಿ, ಈ ತರಹದ ಸಮಸ್ಯೆಗಳ ಪರಿಹಾರವಾಗಿ ಆಯುರ್ವೇದಲ್ಲಿ ವಿಶಿಷ್ಟವಾದ ಔಷಧೋಪಚಾರವನ್ನು ವಿವರಿಸಲಾಗಿದೆ.
ಉಲ್ಲೇಖಿಸಿರುವ ಔಷಧಿಯನ್ನು ಮೃಗಶಿರ ನಕ್ಷತ್ರ ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ಇಡೀ ರಾತ್ರಿ ಇಟ್ಟು ಸೂರ್ಯೋದಯದ ನಂತರ ಸೇವಿಸಿದಲ್ಲಿ ರೋಗಿಗಳಿಗೆ ಹೆಚ್ಚಿನ ಪ್ರಯೋಜನವಾಗುವುದರಿಂದ ಡಿಸೆಂಬರ್ 5 ರಂದು ಮಾರ್ಗಶಿರ ಮಾಸ, ಶುಕ್ಲಪಕ್ಷ, ಪೌರ್ಣಮಿ ತಿಥಿಯಂದು ಔಷಧವನ್ನು ಬೆಳಿಗ್ಗೆ 5 ರಿಂದ 7 ಗಂಟೆಯವರೆಗೂ ನೀಡಲಾಗುತ್ತದೆ.
ಆರೋಗ್ಯ ಆಕಾಂಕ್ಷಿಗಳು ಈ ಶಿಬಿರದ ಸದುಪಯೋಗ ಪಡೆಯಲು ತಮ್ಮ ಹೆಸರನ್ನು ಡಿಸೆಂಬರ್ 4 ರೊಳಗೆ ಮೊ:9740380466, 08192-272020 ಕರೆ ಮಾಡಿ ಹೆಸರು ನೋಂದಣಿ ಮಾಡಲು ತಿಳಿಸಲಾಗಿದೆ.
