ಜಿಲ್ಲೆಯಾಗಿ ಹೊಸತನಕ್ಕೆ ಕಠಿಣ ಕಾನೂನು ಅಡಿಪಾಯ ಹಾಕಿದ್ದ ಅಲೋಕ್ ಕುಮಾರ್ – ಬಾಡದ ಆನಂದ ರಾಜ್
ದಾವಣಗೆರೆ :- ದಾವಣಗೆರೆ ಜಿಲ್ಲೆಯಾಗಿ ಹೊಸತನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳಾಗಿ ಆಗಮಿಸಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡು ಇಡೀ ಜಿಲ್ಲೆಗೆ ಕಾನೂನಿನ ಬಗ್ಗೆ ಹೊಸ ಚೈತನ್ಯ ನೀಡಿ ಮನೆ ಮಾತಾಗಿದ್ದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕಕುಮಾರ್.
ಇಂದು ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ ನಗರದ ವಿವಿಧ ಸಂಘಸಂಸ್ಥೆಗಳ ಮುಖಂಡರಗಳು ಅಭೂತಪೂರ್ವವಾಗಿ ಸನ್ಮಾನಿಸಿ ಅಂದು 2002 ರಲ್ಲಿದ್ದ ಎಸ್ಪಿಯಾಗಿದ್ದ ಅಲೋಕಕುಮಾರ್ ರವರ ಕಾನೂನು ಅಧಿಕಾರಿಯನ್ನ ಇಂದು 2022 ರಲ್ಲಿ ಎಸ್ಪಿಯಾಗಿರುವ ರಿಷ್ಯಂತ್ ರವರ ಅಧಿಕಾರಿಯಲ್ಲಿ ಕಾಣುತ್ತಿದ್ದೇವೆ ಎಂದು ಜಿಲ್ಲೆಯ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ರವರು ಪ್ರಶಂಸೆ ವ್ಯಕ್ತಪಡಿಸಿದರು ಇದೇ ಸಂದರ್ಭದಲ್ಲಿ ಪೂರ್ವ ವಲಯ ಐಜಿಪಿ.ನಗರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ.ಮಾಜಿ ಮಹಾಪೌರ ಎಸ್.ಟಿ.ವಿರೇಶ್. ಬಿಜೆಪಿಯ ದಲಿತ ಮುಖಂಡ ಆಲೂರು ನಿಂಗರಾಜ್. ಪಾಲಿಕೆ ಸದಸ್ಯ ಶಿವನಗೌಡ ಪಾಟೇಲ್. ಹಿರಿಯರಾದ ಒಣರೊಟ್ಟಿ ಮಹಂತೇಶ್.ವೈ.ಮಲ್ಲೇಶ್.ಕೆಪಿ.ಕಲ್ಲಿಂಗಪ್ಪ.ಅಣಜಿ ಬಸವರಾಜ್ ಇನ್ನೂ ಮುಂತಾದರಿದ್ದರು.