ಎ.ವಿ.ಕೆ ಮಹಿಳಾ ಕಾಲೇಜಿನ ಹಳೆಯ ವಿದ್ಯಾರ್ಥಿನಿಯರು ಸಮಾಜಕ್ಕೆ ಮಾದರಿ

ದಾವಣಗೆರೆ: ನಾವು ದಾವಣಗೆರೆ ನಗರದ ಎವಿಕೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇವು ಆದರೆ ಈಗ ಕೇವಲ ಆ ಮಧುರ ಕ್ಷಣಗಳನ್ನು, ತರಗತಿಯ ಪಾಠ ಪ್ರವಚನಗಳನ್ನು ಮೆಲುಕು ಹಾಕುತ್ತ ಜೀವಿಸುತ್ತಿದ್ದೇವೆ. ಈ ಕಾಲೇಜಿಗೆ ನಾವೆಲ್ಲರೂ ತನು-ಮನ-ಧನದಿಂದ ಸೇವೆ ಸಲ್ಲಿಸುತ್ತೇವೆ ಹಾಗೂ ನಮ್ಮ ಕಾಲೇಜಿನ ಏಳಿಗೆಗೆ ಮತ್ತಷ್ಟು ಶ್ರಮಿಸೋಣವೆಂದು ಎವಿಕೆ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾದ ಜಯಮ್ಮ ಹೇಳಿದರು.
ನಗರದ ಹೃದಯ ಭಾಗದಲ್ಲಿರುವ ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದ ಹಿಂದಿನ ವಿದ್ಯಾರ್ಥಿನಿಯರು ನಿನ್ನೆ ಸಮಾಗಮ ಸಭೆಯಲ್ಲಿ ಭಾಗಿಯಾಗಿದ್ದರು. ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕ ವಿದ್ಯಾರ್ಥಿನಿಯರು ರಾಷ್ಟ-ಅಂತರಾಷ್ಟಿಯ ಮಟ್ಟದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆಂದು ಅವರವರ ಹುದ್ದೆ-ಸೇವೆ ಸಲ್ಲಿಸುತ್ತಿರುವ ಕ್ಷೇತ್ರಗಳನ್ನು ಕುರಿತು ಅನೇಕ ವಿದ್ಯಾರ್ಥಿನಿಯರು ಸಭೆಯಲ್ಲಿ ಪರಿಚಯ ಮಾಡಿಕೊಟ್ಟರು. ಸಾಹಿತ್ಯ, ಸಂಗೀತ, ಕ್ರೀಡೆ, ವಿಜ್ಞಾನ, ರಾಜಕೀಯ, ಶೈಕ್ಷಣಿಕ, ಕ್ಷೇತ್ರದಲ್ಲಿ ನಾವು ನಮ್ಮ ಸೇವೆ ಸಲ್ಲಿಸಲು ಎ.ವಿ.ಕೆ. ಕಾಲೇಜಿನ ಅಧ್ಯಾಪಕರೇ ಕಾರಣರಾಗಿದ್ದಾರೆಂದು ಮುಕ್ತಕಂಠದಿ0ದ ಗುರು ಪರಂಪರೆಯನ್ನು ಸ್ಮರಿಸಿಕೊಂಡರು.
ಅದೇರೀತಿ ಹಳೆಯ ವಿದ್ಯಾರ್ಥಿನಿಯರ ಸಂಘದ ಕಾರ್ಯದರ್ಶಿಯಾದ ಶ್ರೀಮತಿ ಮಾಧುರಿ ಅವರು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ, ನಮ್ಮ ಎ.ವಿ.ಕೆ. ಕಾಲೇಜು ಇಂದಿಗೂ ಕೂಡಾ ದಾವಣಗೆರೆ ಜಿಲ್ಲೆಯಲ್ಲಿ ಯಾವ ಕಾಲೇಜಿಗೂ ಕಡಿಮೆ ಏನಿಲ್ಲ, ಇಲ್ಲಿನ ಅಧ್ಯಾಪಕರು ಕೇವಲ ಪಾಠಕ್ಕೆ ಮಾತ್ರ ಸೀಮಿತರಾದವರಲ್ಲ. ಪಠ್ಯ-ಪಠ್ಯೇತರ ಚಟುವಟಿಕೆ, ಸಾಮಾಜಿಕ ಬದ್ಧತೆ ಇಟ್ಟುಕೊಂಡು ನಮ್ಮನ್ನು ಸುಂದರ ಶಿಲೆಯಾಗಿಸಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಪಿ. ಕುಮಾರ್ ಅವರು, ಎ.ವಿ.ಕೆ. ಮಹಿಳಾ ಕಾಲೇಜಿನ ಹಳೆಯ ವಿದ್ಯಾರ್ಥಿನಿಯರೇ ನಮ್ಮ ಸಮಾಜಕ್ಕೆ ನಿಜವಾದ ಆಸ್ತಿ. ನಿಮ್ಮಿಂದ ಸಮಾಜ & ಸಂಸ್ಕೃತಿಗೆ ಮತ್ತಷ್ಟು ಸೇವೆ ಸಲ್ಲಿಸುವ ಕಾರ್ಯವಾಗಲಿ. ಈ ಕಾಲೇಜು ನಿಮ್ಮದು, ಯಾವ ಅಳುಕಿಲ್ಲದೆ ಮುಕ್ತವಾಗಿ ವರ್ಷಕ್ಕೆ ಒಮ್ಮೆ ಬಂದು ನಿಮ್ಮ ಹಳೆಯ ನೆನಪುಗಳನ್ನು ಸ್ಮರಿಸಿಕೊಳ್ಳಿ. ಅದಕ್ಕೆ ನಾವು ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತೇವೆಂದು ನುಡಿದರು.
ಸಹನ ಪ್ರಾರ್ಥಿಸಿದರು, ವೇದಿಕೆಯಲ್ಲಿ ಉಪಸ್ಥಿತರಿದ್ದ ಹಳೆಯ ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಶ್ವೇತಾ ಗಾಂಧಿ ಎಲ್ಲರನ್ನು ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ. ಅನುರಾಧ ಪಿ.ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಐಕ್ಯೂಎಸಿ ಸಂಚಾಲಕರಾದ ಪ್ರೊ. ಆರ್.ಆರ್. ಶಿವಕುಮಾರ್ ಉಪಸ್ಥಿತಿ ನುಡಿಗಳಾನ್ನಾಡಿದರು. ಹಳೆಯ ವಿದ್ಯಾರ್ಥಿನಿಯಾದ ಪ್ರಕೃತಿ ಸರ್ವರನ್ನು ವಂದಿಸಿದರು. ಈ ಸಭೆಯಲ್ಲಿ ನಿವೃತ್ತ ಪ್ರಾಧ್ಯಾಪಕರು, ಅಧ್ಯಾಪಕ ಹಾಗೂ ಅಧ್ಯಾಪಕೇತರ ವರ್ಗದವರು ಭಾಗಿಯಾಗಿದ್ದರು. ಸಭೆಯ ನಂತರ ಹಳೆಯ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇದೇ ವೇದಿಕೆಯಲ್ಲಿ ವಿಜೃಂಭಣೆಯಿ0ದ ನೆರವೇರಿದವು.