ಜನಾರ್ಧನ ರೆಡ್ಡಿ ಚಿತ್ರ ಇದ್ದ ಅಂಬುಲೆನ್ಸ್ ವಶ

ಕೊಪ್ಪಳ : ಸಾರ್ವಜನಿಕರ ಬಳಕೆಗೆ ನೀಡಲಾಗಿದ್ದ ಆಂಬುಲೆನ್ಸ್ ಅನ್ನು ಅಧಿಕಾರಿಗಳು ಶನಿವಾರ ರಾತ್ರಿ ಕನಕಗಿರಿಯಲ್ಲಿ ವಶಪಡಿಸಿಕೊಂಡಿದ್ದಾರೆ.
ಚುನಾವಣಾ ಮಾದರಿ ನೀತಿಸಂಹಿತೆ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಈ ಆಂಬುಲೆನ್ಸ್ ವಶ ಪಡಿಸಿಕೊಳ್ಳಲಾಗಿದೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ, ಬಳ್ಳಾರಿ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಅರುಣಾ ಲಕ್ಷ್ಮೀ ಹಾಗೂ ಕನಕಗಿರಿ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಡಾ.ವೆಂಕಟರಮಣ ಭಾವಚಿತ್ರಗಳು ವಾಹನದ ಮೇಲೆ ಇದ್ದವು.
ಮಾದರಿ ನೀತಿ ಸಂಹಿತೆ ಘೋಷಣೆಯಾದ ಬಳಿಕ ಮತದಾರರ ಮೇಲೆ ಪ್ರಭಾವ ಬೀರುವ ಈ ರೀತಿಯ ವಾಹನಗಳನ್ನು ಬಳಸುವಂತಿಲ್ಲ. ಉಚಿತ ಸೇವೆಯ ಹೆಸರಿನಲ್ಲಿ ಆಂಬುಲೆನ್ಸ್ ವಿವಿಧ ಗ್ರಾಮಗಳಲ್ಲಿ ಸಂಚರಿಸಿದ ಮಾಹಿತಿಯಿದೆ. ವಾಹನ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ’ ಎಂದು ಕ್ಷೇತ್ರದ ಚುನಾವಣಾಧಿಕಾರಿ ಸಮೀರ ಮುಲ್ಲಾ ತಿಳಿಸಿದರು.