ರಾಜ್ಯದಲ್ಲಿ ಮತ್ತೊಂದು ‘ತಾಲ್ಲೂಕು ಉದಯವಾಯ್ತು! ‘ಮಂಚೇನಹಳ್ಳಿ’ ನೂತನ ತಾಲೂಕು, ಸರ್ಕಾರದಿಂದ ‘ಗೆಜೆಟ್ ಅಧಿಸೂಚನೆ’

ಬೆಂಗಳೂರು: ಮಂಚೇನಹಳ್ಳಿ ಹೊಸ ತಾಲೂಕು ಘೋಷಣೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಹೊಸ ತಾಲೂಕು ಉದಯವಾಗಿದ್ದು, ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಟ್ವಿಟ್ ಮಾಡಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ತಮ್ಮ ಟ್ವಿಟ್ನಲ್ಲಿ ನನ್ನ ಕೈ ಅಲ್ಲ ಎದೆ ಬಗೆದರೂ ಮಂಚೇನಹಳ್ಳಿ ತಾಲ್ಲೂಕು ರಚನೆ ವಿಷಯದಲ್ಲಿ ನನ್ನ ಜನರಿಗೆ ಬದ್ಧನಾಗಿದ್ದೇನೆ ಎಂದು ಮಾತು ಕೊಟ್ಟಿದ್ದೆ. ಮಂಚೇನಹಳ್ಳಿ ತಾಲ್ಲೂಕು ರಚನೆಯಲ್ಲಿ ಈಗ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಲಾಗಿದ್ದು ರಾಜ್ಯಪತ್ರದಲ್ಲಿ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ. ಕೊಟ್ಟ ಮಾತು ಉಳಿಸಿಕೊಂಡ ಬಗ್ಗೆ ತೃಪ್ತಿ, ಹೆಮ್ಮೆಯಾಗುತ್ತಿದೆ ಅಂತ ಹೇಳಿದ್ದಾರೆ.
ಪ್ರಸ್ತುತ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಗೌರಿಬಿದನೂರು ತಾಲೂಕಿನ ಅತಿ ದೊಡ್ಡ ಹೋಬಳಿಯಾಗಿರುವ ಮಂಚೇನಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು ಈ ಹಿಂದೆ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಒಪ್ಪಿಗೆ ನೀಡಿ, ಅನುಮೋದನೆ ಪಡೆದುಕೊಳ್ಳಲಾಗಿತ್ತು, ಆದರೆ ಈಗ ಸರಕಾರದ ಅಧಿಕೃತ ಆದೇಶ ಬಂದಿದೆ.

 
                         
                       
                       
                       
                       
                      