ಅನುಮಾನಸ್ಪದ ಪಾರಿವಳ ಬಿಡುಗಡೆ
ಪಾರಿವಾಳದ ಕಾಲುಗಳಲ್ಲಿ ಉಂಗುರು, ರೆಕ್ಕಕೆಳಭಾಗದಲ್ಲಿತ್ತು ಚೀನಾ ಭಾಷೆ ಸಂದೇಶ
ಮುಂಬೈ : ತೈವಾನ್‌ನಲ್ಲಿ ಪಾರಿವಾಳಗಳ ರೇಸ್‌ಗೆ ಬಳಸುತ್ತಿದ್ದ ಈ ಪಾರಿವಾಳ ಆಕಸ್ಮಿಕವಾಗಿ ಭಾರತಕ್ಕೆ ಬಂದಿದೆ ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ ಕಳೆದ 8 ತಿಂಗಳ ಹಿಂದೆ ಚೀನಾದ ಗೂಢಚಾರಿ ಎಂದು ಶಂಕಿಸಿ ಸೆರೆ ಹಿಡಿಯಲಾಗಿದ್ದ ಪಾರಿವಾಳವನ್ನು ಮುಂಬೈನ ಪಶುವೈದ್ಯಕೀಯ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ಚೆಂಬೂರಿನ ಪಿರ್‌ಪೌ ಜೆಟ್ಟಿಯಲ್ಲಿ ಆರ್‌ಸಿಎಫ್ ಪೊಲೀಸರು ಪಾರಿವಾಳವನ್ನು ಸೆರೆ ಹಿಡಿದಿದ್ದರು. ಈ ಪಾರಿವಾಳದ ಕಾಲುಗಳಿಗೆ ಒಂದು ಅಲ್ಯುಮಿನಿಯಂ ಹಾಗೂ ಮತ್ತೊಂದು ತಾಮ್ರದ ಉಂಗುರ ಹಾಕಲಾಗಿತ್ತು. ಅಲ್ಲದೇ ಅದರ ರೆಕ್ಕೆಯ ಕೆಳಭಾಗದಲ್ಲಿ ಚೀನಿ ಭಾಷೆ ರೀತಿಯ ಲಿಪಿಯಲ್ಲಿ ಸಂದೇಶವನ್ನು ಬರೆಯಲಾಗಿತ್ತು. ಹೀಗಾಗಿ ಇದನ್ನು ಚೀನಾವು ಭಾರತದ ವಿರುದ್ಧ ಗೂಢಚಾರಿಕೆಗೆ ಬಿಟ್ಟಿದೆ ಎಂದು ಶಂಕಿಸಲಾಗಿತ್ತು. ಆದರೀಗ ಆಸ್ಪತ್ರೆಯು ಪೊಲೀಸರ ಅನುಮತಿ ಮೇರೆಗೆ ಪಾರಿವಾಳವನ್ನು ಬಿಡುಗಡೆ ಮಾಡಿದೆ.
ಆಸ್ಪತ್ರೆಯಲ್ಲಿ ಸೋಂಕು ಮತ್ತು ಗಾಯಗೊಂಡ ಪಕ್ಷಿಗಳಿಗೆ ಮೀಸಲಾದ ಎಂಟು ಪಂಜರಗಳಲ್ಲಿ ಒಂದರಲ್ಲಿ ಈ ಪಾರಿವಾಳವನ್ನು ಇಡಲಾಗಿತ್ತು. ಆರ್‌ಸಿಎಫ್ ಪೊಲೀಸ್ ಠಾಣೆಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ದಂಗರ್ ತಿಳಿಸಿದ್ದರು. ಮಾಧ್ಯಮ ವರದಿಯ ನಂತರ, ಆಸ್ಪತ್ರೆಯು ಜನವರಿ 22 ರಂದು ಪೊಲೀಸರಿಗೆ ಮತ್ತೊಮ್ಮೆ ಪತ್ರ ಬರೆದು, ಪಾರಿವಾಳವನ್ನು ಬಿಡಲು ಅನುಮತಿ ಕೇಳಿತ್ತು.