ದಾವಣಗೆರೆಯಲ್ಲಿ ಅಪೋಲೋ ಸರ್ಕಸ್! ಮೈನವಿರೇಳಿಸುವ ಸರ್ಕಸ್ ಕಸರತ್ತು ನೋಡಿ ಆನಂದಿಸಿ

ದಾವಣಗೆರೆ: ನಗರದ ಹದಡಿ ರಸ್ತೆಯಲ್ಲಿ ನಾಳೆ ಸಂಜೆ 7 ಗಂಟೆಗೆ ಅಪೋಲೋ ಸರ್ಕಸ್ ಉದ್ಘಾಟನೆಗೊಳ್ಳಲಿದೆ ಎಂದು ಸರ್ಕಸ್ ಮಾಲೀಕರಾದ ಸುನಿಲ್ ಜಾರ್ಜ್ ನಗರದ ಮಾಗನೂರು ಬಸಪ್ಪ ಪೆಟ್ರೋಲ್ ಬಂಕ್ ಎದುರಿಗಿನ ಮೈದಾನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೇಯರ್ ಜಯಮ್ಮ ಗೋಪಿನಾಯ್ಕ್ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯೆ ಗೀತಾ ದಿಳ್ಯಪ್ಪ, ಪತ್ರಕರ್ತ ಎಂ.ಎಸ್ ವಿಕಾಸ್ ಆಗಮಿಸಲಿದ್ದಾರೆ. ಅಪೋಲೋ ಸರ್ಕಸ್ ಈ ಮೊದಲು ಅನೇಕ ನಗರಗಳಲ್ಲಿ ಸಾವಿರಾರು ಸರ್ಕಸ್ ಶೋಗಳನ್ನು ನೀಡಿದ್ದು, ಲಕ್ಷಾಂತರ ಪ್ರೇಕ್ಷಕರನ್ನು ರಂಜಿಸಿದೆ. ಕೊರೊನಾದ ನಂತರ ಈಗ ನಗರದ ಜನತೆಯ ಮನರಂಜನೆಗಾಗಿ ಪ್ರಾರಂಭಿಸಲಾಗಿದೆ ಎಂದರು.

 

 

ಎಷ್ಟೋ ವರ್ಷಗಳ ಹಿಂದೆ ನೀವು ಸರ್ಕಸ್‌ನಲ್ಲಿ ನೋಡುತ್ತಿದ್ದಂತಹ ಕಸರತ್ತುಗಳನ್ನು ಈ ಸರ್ಕಸ್‌ನಲ್ಲಿ ನೋಡಬಹುದಾಗಿದೆ. 60 ಅಡಿ ಎತ್ತರದಲ್ಲಿ ತುಂಬಾ ಅಪಾಯಕಾರಿ ಜೋಕಾಲಿ ಆಟ, 5 ತಲೆಮಾರಿನ ಅಪಾಯಕಾರಿ ತ್ರಿಪಾಲ, ರಿಂಗ್ ಡ್ಯಾನ್ಸ್, ಒಂದು ಹುಡುಗಿಯನ್ನು ಹಲಗೆಯ ಎದುರುಗಡೆ ನಿಲ್ಲಿಸಿ ದೂರದಿಂದ ಚಾಕುಗಳನ್ನು ಬಿಸಾಡುವುದು, ಸಣ್ಣ ಗ್ಲೋಬ್‌ನಲ್ಲಿ ಬೈಕ್ ಕಸರತ್ತು, ಫೈರ್ ಡ್ಯಾನ್ಸ್, 60 ಅಡಿ ಎತ್ತರದವರೆಗೆ ಜೋಡಿಯಿಂದ ನವರ್ ಪಟ್ಟಿ, ಜಾಗಲಿಂಗ್, ಸ್ಟಿಕ್ ಜಾಗಲಿಂಗ್, ಲಟ್ಟು ಶೋ, ಸೈಕಲ್ ಬ್ಯಾಲೆನ್ಸ್, ಬೋನ್‌ಲೆಸ್ ಕ್ಯಾಂಡಲ್, ರೋಲಿಂಗ್ ಬ್ಯಾಲೆನ್ಸ್, ರಷ್ಯಾನ್ ರೋಪ್ ಹಾಗೂ ಅನೇಕ ತರಹದ ಮೈನವಿರೇಳಿಸುವಂತಹ ಕಸರತ್ತುಗಳು ನೋಡಲು ಸಿಗುತ್ತವೆ.

ಮಕ್ಕಳ ಮನರಂಜನೆಗಾಗಿ ಅತಿ ಗಿಡ್ಡ ಜೋಕ್‌ಗಳಿಂದ ಹಾಸ್ಯ ಚಟಾಕಿ, ವಿದೇಶಿ ನಾಯಿಗಳಿಂದ ಅನೇಕ ತರಹದ ಕಸರತ್ತುಗಳು ಇವೆ. ಎರಡು ಗಂಟೆ ಅವಧಿಯ ಶೋ ಇದ್ದು ಸಂಪೂರ್ಣ ಪರಿವಾರ ಸಮೇತ ಬಂದು ನೋಡಬಹುದಾಗಿದೆ. ಈ ಸರ್ಕಸ್ ಕಂಪನಿಯಲ್ಲಿ ಸುಮಾರು 40 ಸಿಬ್ಬಂದಿಗಳಿದ್ದಾರೆ ಎಂದರು. ಸೋಮವಾರದಿಂದ ಶುಕ್ರವಾರದವರೆಗೆ ದಿನಂಪ್ರತಿ ಸಂಜೆ 4 ಗಂಟೆಗೆ ಮತ್ತು ರಾತ್ರಿ 7 ಗಂಟೆಗೆ ಎರಡು ಶೋಗಳು ಇರುತ್ತವೆ. ಶನಿವಾರ ಮತ್ತು ರವಿವಾರ ಮಧ್ಯಾಹ್ನ 1 ಗಂಟೆಗೆ, ಸಾಯಂಕಾಲ 4 ಗಂಟೆಗೆ ಮತ್ತು ರಾತ್ರಿ 7 ಗಂಟೆಗೆ ಮೂರು ಶೋಗಳಿರುತ್ತವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಜಯ್ ಇದ್ದರು.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!