ನಕಲಿ ಜಾತಿ ಪ್ರಮಾಣ ಪಡೆದವರ ಮೇಲೆ ಕಾನೂನು ಕ್ರಮಕ್ಕೆ ಹರಿಹರದ ಡಿ ಎಸ್ ಎಸ್ ಮಹಾಂತೇಶ್ ಮನವಿ

ದಾವಣಗೆರೆ : ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಲಿಂಗಾಯತ ಜಂಗಮರಾಗಿದ್ದರೂ ಕಾನೂನು ಬಾಹಿರವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವುದಲ್ಲದೆ ಅಖಿಲ ಕರ್ನಾಟಕ ಡಾ. ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಕ್ಕೆ ಪ್ರೋತ್ಸಾಹಿಸುತ್ತಿರುವ ಶಾಸಕ ಎಂ.ಪಿ. ರೇಣುಕಾಚಾರ್ಯರ ಕುಟುಂಬಸ್ಥರ ಹಾಗೂ ಎಸ್ಸಿ ಜಾತಿ ಪ್ರಮಾಣಪತ್ರ ಪಡೆದಿರುವ ಜಿ.ಪಂ ಮಾಜಿ ಸದಸ್ಯ ಬಿ.ಎಂ. ವಾಗೀಶ ಸ್ವಾಮಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ ಮೂಲಕ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಹರಿಹರ ತಾಲ್ಲೂಕು ಸಂಚಾಲಕರು ಪಿ.ಜೆ. ಮಹಾಂತೇಶ್, ಪ್ರದೀಪ್ ಕುಮಾರ್ ಜಿಗಳಿ, ಶಶಿಕುಮಾರ್, ಯುವರಾಜ ಹೊಸಪಾಳ್ಯ, ಕೀರ್ತಿಕುಮಾರ್ ಯಲವಟ್ಟಿ, ಅಂಜನಿ, ಮಂಜುನಾಥ, ಹಾಲಿವಾಣ ಹರೀಶ್, ಭಾನುವಳ್ಳಿ ಮಧು, ಮಂಜು, ರಾಕೇಶ್, ಅಣ್ಣಪ್ಪ, ರೇವಣಸಿದ್ದಪ್ಪ, ಕಿರಣ್, ಸ್ವಾಮಿ, ರಾಜು, ದರ್ಶನ್, ಹನುಮಂತ, ಹೊನ್ನಪ್ಪ ಇದ್ದರು.

ಸುದ್ದಿಗಾಗಿ ಸಂಪರ್ಕಿಸಿ:- garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!