ಪಾಲಿಕೆ ವ್ಯಾಪ್ತಿಯ ಸರ್ಕಾರಿ ಒತ್ತುವರಿ  ಜಾಗಗಳನ್ನು ತೆರವುಗೊಳಿಸಲು ಡಿ ಸಿ ಗೆ ಮನವಿ : ಕೆ. ಜಿ ಯಲ್ಲಪ್ಪ

ಪಾಲಿಕೆ ವ್ಯಾಪ್ತಿಯ ಸರ್ಕಾರಿ ಒತ್ತುವರಿ  ಜಾಗಗಳನ್ನು ತೆರವುಗೊಳಿಸಲು ಡಿ ಸಿ ಗೆ ಮನವಿ : ಕೆ. ಜಿ ಯಲ್ಲಪ್ಪ

ದಾವಣಗೆರೆ : ದಾವಣಗೆರೆ ನಗರದಲ್ಲಿ ಕೆಲವು ಪ್ರಭಾವಶಾಲಿಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ೩೩ ಕೆ.ವಿ., ೬೬ ಕೆ.ವಿ. ಹೈಟೆನ್ಷನ್ ಮಾರ್ಗದ ಕೆಳಗೆ ಇರುವ ಜಾಗಗಳಿಗೆ ಕೆಲವರು ಅಕ್ರಮವಾಗಿ ಡೋರ್ ನಂಬರ್ ತೆಗೆದುಕೊಂಡಿದ್ದಾರೆ . ಕೆಲವು ಬಡಾವಣೆಗಳಲ್ಲಿ ಸರ್ಕಾರಿ ಜಾಗ ಹಾಗೂ ಉದ್ಯಾನವನಗಳ ಜಾಗಗಳನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ರಾಜ್ಯಸರ್ಕಾರಕ್ಕೆ ಸೇರಿದ ಸಾವಿರಾರು ಕೋಟಿ ರೂ.ಗಳ ಆಸ್ತಿ ಕಂಡವರ ಪಾಲಾಗಿದೆ. ನಗರ ವ್ಯಾಪ್ತಿಯಲ್ಲಿ ಹಲವರು ಸರ್ಕಾರಿ ಜಾಗಗಳನ್ನುಒತ್ತುವರಿ ಮಾಡಿಕೊಂಡಿರುವುದನ್ನು ಮಹಾನಗರಪಾಲಿಕೆ ಆಯುಕ್ತರು ಹಾಗೂ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರುಗಳು ತೆರವು ಮಾಡಿಸದೇ ಇರುವುದು
ಖಂಡನೀಯ. ಎಂದು ವಿಶ್ವ ಕರವೇ ರಾಜ್ಯಾಧ್ಯಕ್ಷರಾದ ಕೆ.ಜಿ ಯಲ್ಲಪ್ಪ ನವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ರಾಜಕಾಲುವೆಗಳಿಗೆ ಸೇರಿದ ಜಾಗವನ್ನು ಕೆಲವು ಸಂಸ್ಥೆಗಳು ತಮ್ಮ ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡಿದ್ದು ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿಕೊಂಡಿz್ದÁರೆ. ನಗರಪಾಲಿಕೆಯ ಕೆಲವು ಅಧಿಕಾರಿಗಳು ಹಾಗೂ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕೆಲವು ಅಧಿಕಾರಿಗಳು, ಖಾಸಗಿ ಬಡಾವಣೆಗಳ ಮಾಲೀಕರ ಜೊತೆಗೆ ಶಾಮೀಲಾಗಿ ಬಡಾವಣೆಗಳಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗಗಳಿಗೆ ಅಕ್ರಮವಾಗಿ ಡೋರ್ ನಂಬರ್ ನೀಡಿದ ಪ್ರಕರಣಗಳಿವೆ.

ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ಪಕ್ಕದಲ್ಲಿರುವ ಅಶೋಕ ಇನ್ ಹೊಟೇಲ್ ಮಾಲೀಕರು ರಾಜಕಾಲುವೆ ಜಾಗವನ್ನು ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಿಸಿಕೊಂಡು ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಆದ್ದರಿಂದ ತಾವು ಇಂತಹ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸರ್ಕಾರಿ ಜಾಗಗಳನ್ನು ಸರ್ಕಾರದ ವಶಕ್ಕೆ ಮರಳಿ ಪಡೆಯಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕೆ.ಹೆಚ್. ಮಹಬೂಬ್, ಅಮ್ಜದ್ ಅಲಿ, ರವಿ ಎಂ., ಬಾಬುರಾವ್, ದಯಾನಂದ ಬಿ.ಇ, ಸಂತೋಷ್ ದೊಡ್ಮನಿ, ಸಿದ್ಧೇಶ್ ಎಸ್., ಗದಿಗೆಪ್ಪ, ರಮೇಶ್ ಜಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!