ತೋಟಗಾರಿಕೆ ಇಲಾಖೆಯಿಂದ ಸಹಾಯಧನಕ್ಕಾಗಿ ಅರ್ಜಿ
ದಾವಣಗೆರೆ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹರಿಹರ ತಾಲ್ಲೂಕಿನ ತೋಟಗಾರಿಕೆ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ನೀರು ಸಂಗ್ರಹಣಾ ಘಟಕ, ತೆಂಗು ಸಂಗ್ರಹಣಾ ಘಟಕ, ಮೋಹಕ ಕೀಟಬಲೆಗಳು, ಜಿಗುಟಾದ ಬಲೆಗಳು, ಸೌರಶಕ್ತಿ ಆಧಾರಿತ ಕೃತಕ ಬುದ್ದಿಯ ಕೀಟನಿಯಂತ್ರಕ ಬಲೆಗಳ ಖರೀದಿಗೆ, ಸೌರಶಕ್ತಿ ಆಧಾರಿತ ಕೃಷಿ ಪಂಪ್ಸೆಟ್ ಅಳವಡಿಸಲು ನೀರಿನಲ್ಲಿ ಕರಗುವ ರಸಗೊಬ್ಬರಗಳ ಖರೀದಿಗೆ, ಲಘು ಪೆÇಷಕಾಂಶಗಳ ಮಿಶ್ರಣ/ ಬೆಳೆ ಸ್ಪೆಷಲ್/ ಜೈವಿಕಗೊಬ್ಬರಗಳ ಹಾಗೂ ಪ್ಲಾಸ್ಟಿಕ್ಕ್ರೇಟ್ಸ್ಖರೀದಿಗೆ ಸಹಾಯ ಧನ ಪಡೆಯಬಹುದೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.