ಡಿ.ಇಡಿ ವಿಶೇಷ ಶಿಕ್ಷಣ ಪ್ರವೇಶಕ್ಕೆ ಅರ್ಜಿ ಆಹ್ವಾನ
ದಾವಣಗೆರೆ : ದಿವ್ಯಾಂಗ ವ್ಯಕ್ತಿಗಳ ಕೌಶಲ್ಯಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣಗಳ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಕಂದರಾಬಾದ್‍ನ ಎನ್‍ಐಇಪಿಐಡಿಯ ಆಡಳಿತ ನಿಯಂತ್ರಣದ) ದೇವರಾಜ್ ಬಡಾವಣೆ, ಬಿ.ಬ್ಲಾಕ್ ದಾವಣಗೆರೆ ವತಿಯಿಂದ ಉದ್ಯೋಗ ಆಧಾರಿತ ಶಿಕ್ಷಕರ ತರಬೇತಿ ಕೋರ್ಸ್‍ಗಳಿಗೆ ಪ್ರಸಕ್ತ ಸಾಲಿನ ಪ್ರವೇಶ ಅಧಿಸೂಚನೆ ಹೊರಡಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಜು.22 ರೊಳಗಾಗಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಡಿ.ಇಡಿ. ವಿಶೇಷ ಶಿಕ್ಷಣ (Iಆಆ), ಡಿ.ಇಡಿ. ವಿಶೇಷ ಶಿಕ್ಷಣ (ಊI) ಕೋರ್ಸ್‍ಗಳು ಲಭ್ಯವಿದ್ದು, ಕೋರ್ಸ್‍ನ ಅವಧಿಯು 02 ವರ್ಷಗಳಾಗಿದೆ.
ಅರ್ಹತಾ ಮಾನದಂಡ : 10+2/ಪಿಯುಸಿಯಲ್ಲಿ ಕನಿಷ್ಠ 50% ಒಟ್ಟು ಅಂಕಗಳು ಅಥವಾ ಯಾವುದೇ ಸ್ಟ್ರೀಮ್‍ನಲ್ಲಿ ಮಾನ್ಯತೆ ಮಾನ್ಯತೆ ಪಡೆದ ಕೇಂದ್ರ/ರಾಜ್ಯ ಪರೀಕ್ಷಾ ಮಂಡಳಿಯಿಂದ ಅದರ ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಎಸ್.ಸಿ, ಎಸ್.ಟಿ, ಒಬಿಸಿ, ಪಿಡಬ್ಲ್ಯೂಡಿ ಅಥವಾ ಇಡಬ್ಲ್ಯೂಎಸ್ ವರ್ಗಗಳಿಗೆ ಸಂಬಂಧಿಸಿದ ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ಅನ್ವಯವಾಗುತ್ತದೆ. ಆನ್‍ಲೈನ್ ನೋಂದಣಿಗಾಗಿ https://rehabcouncil.co.in/Registration/Index/MTAwMQ%3d%3d ಭೇಟಿ ನೀಡಬಹುದಾಗಿದೆ. ಕೇಂದ್ರದ ಹೆಸರು ಸಂಯುಕ್ತ ಪ್ರಾದೇಶಿಕ ಕೇಂದ್ರ ದಾವಣಗೆರೆ, ಕೇಂದ್ರ ಕೋಡ್ ಏಏ044.
ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಒಬಿಸಿ ಅರ್ಜಿದಾರರಿಗೆ ರೂ.500. ಎಸ್.ಸಿ, ಎಸ್.ಟಿ, ಪಿಡಬ್ಲ್ಯೂಡಿ, ಇಡಬ್ಲ್ಯೂಎಸ್ ಅರ್ಜಿದಾರರಿಗೆ ರೂ.350 ನಿಗದಿಪಡಿಸಲಾಗಿದೆ. ಪಾವತಿಗಳನ್ನು ಆನ್‍ಲೈನ್ ಮೋಡ್ (ಡೆಬಿಟ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್) ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ ದೂ.08192-233464/465, 8746043062, 8610660894, 9490020080 ಅಥವಾ ಇ-ಮೇಲ್ director.crcdvg@gmail.com, ವೆಬ್‍ಸೈಟ್ ವಿಳಾಸ https://crcdvg.nic.in ಗೆ ಭೇಟಿ ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.