ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಲೇಖಕರಿಂದ ಅರ್ಜಿ ಆಹ್ವಾನ.

ಚಿತ್ರದುರ್ಗ: ಜಿಲ್ಲಾಮಟ್ಟದಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡದ ದೌರ್ಜನ್ಯ ಅಧಿನಿಯಮದಲ್ಲಿರುವ ಅಸ್ಪøಶ್ಯತೆ ನಿವಾರಣೆ ವಿಷಯವನ್ನು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತಿಳಿಯಪಡಿಸಲು ಅಗತ್ಯ ಕಾರ್ಯಕ್ರಮ ರೂಪಿಸಿಕೊಳ್ಳಲಾಗಿದ್ದು, ಅದರಂತೆ ಜಿಲ್ಲೆಯ ಅರ್ಹ ಬೀದಿ ನಾಟಕ ಕಲಾ ತಂಡಗಳಿಗೆ ತರಬೇತಿ ನೀಡಿ ಬೀದಿ ನಾಟಕ ಮೂಲಕ ಸಾರ್ವಜನಿಕರಲ್ಲಿ ಜನ ಜಾಗೃತಿ ಮೂಡಿಸಲು ಆಶಿಸಲಾಗಿದೆ. ಇದರಡಿ ಜಿಲ್ಲೆಯ ನುರಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಲೇಖಕರನ್ನು ಆಯ್ಕೆ ಮಾಡಿ ಅವರಿಗೆ ಅಗತ್ಯ ತರಬೇತಿ ನೀಡಿ, ಅವರಿಂದ ಬೀದಿ ನಾಟಕ ಸ್ಕೀಪ್ಟ್‍ಗಳನ್ನು ರಚಿಸಬೇಕಿದೆ. ಈ ಸಂಬಂಧ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 16 ಅರ್ಜಿ ಸಲ್ಲಿಸಲು ಕೊನೆಯ ದಿನ.
ಅರ್ಜಿ ಸಲ್ಲಿಸುವ ಲೇಖಕರು ಕಡ್ಡಾಯವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಲೇಖಕರು ಇತ್ತೀಚಿನ ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಪಡಿತರ ಚೀಟಿ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿದಾರ ಲೇಖಕರು ಕನಿಷ್ಠ 1 ಕಥಾಸಂಕಲನ, ಕವನ ಸಂಕಲನ, ನಾಟಕಗಳು, ಇತರೆ ಸಾಹಿತ್ಯ ಲೇಖಕರಾಗಿ ಪುಸ್ತಕಗಳನ್ನು ಸ್ವಂತ ಪ್ರಕಾಶನ ಅಥವಾ ಬೇರೆ ಪ್ರಕಾಶನಗಳಿಂದ ಪ್ರಕಟಿಸಿದವರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಿದ ಲೇಖಕರ ಆಯ್ಕೆಯನ್ನು ಇಲಾಖೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗುವುದು. ಈ ವಿಷಯದಲ್ಲಿ ಸಮಿತಿಯ ನಿರ್ಧಾರವು ಅಂತಿಮವಾಗಿರುತ್ತದೆ. ಆಯ್ಕೆಯಾದ 5 ಜನ ಲೇಖಕರು ಬೀದಿ ನಾಟಕದ ಸ್ಕ್ರೀಪ್ಟ್ ಅನ್ನು ಒಂದು ವಾರದ ಕಾಲಮಿತಿಯೊಳಗೆ ಸಿದ್ದಪಡಿಸುವ ಷರತ್ತಿಗೆ ಒಳಪಡತಕ್ಕದ್ದು. ಆಯ್ಕೆಯಾದ 5 ಜನ ಲೇಖಕರಿಗೆ ತಲಾ ರೂ.5,000/- ಗಳ ಗೌರವ ಸಂಭಾವನೆ ಪಾವತಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08194-224496 ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!