Ukraine Kannadiga: ಉಕ್ರೇನಲ್ಲಿರುವ ಕನ್ನಡಿಗರ ರಕ್ಷಣೆಗೆ ನೋಡಲ್ ಅಧಿಕಾರಿ ನೇಮಕ
ಬೆಂಗಳೂರು: ಉಕ್ರೇನ್ ukraine- russia ಮೇಲೆ ರಷ್ಯಾ ಯುದ್ಧ ಸಾರುತ್ತಿದ್ದಂತೆ ಉಕ್ರೇನ್ ನಲ್ಲಿ ರಷ್ಯಾ ಯುದ್ಧ ವಿಮಾನಗಳು ಆರ್ಭಟಿಸುತ್ತಿವೆ. ಪ್ರಮುಖ ನಗರಗಳ ಮೇಲೆ ದಾಳಿ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದೆ.
ಉಕ್ರೇನ್ ನಿಂದ ಕನ್ನಡಿಗರನ್ನು ರಕ್ಷಿಸಿ, ವಾಪಸ್ ಕರೆತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಐಎಫ್‌ಎಸ್ ಅಧಿಕಾರಿ ಡಾ. ಮನೋಜ್ ರಾಜನ್‌ರನ್ನು ನೋಡಲ್ ಅಧಿಕಾರಿಯಾಗಿ nodal officer IFS Dr. Manoj Rajan ನೇಮಕ ಮಾಡಿದೆ.
ವಿದೇಶಾಂಗ ಸಚಿವಾಲಯ Indian Embassy kyiv ಹಾಗೂ ಉಕ್ರೇನ್ ಕಿವ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಜೊತೆ ನೋಡಲ್ ಅಧಿಕಾರಿ ಸಮನ್ವಯ ಸಾಧಿಸಿ ಅಲ್ಲಿ ಸಿಲುಕಿಕೊಂಡಿರುವ ರಾಜ್ಯದ ಜನರನ್ನು ಕರೆತರುವ ಕೆಲಸ ಮಾಡಲಿದ್ದಾರೆ.
ಸಿಎಂ ಕಚೇರಿ ಹಾಗೂ ಮುಖ್ಯ ಕಾರ್ಯದರ್ಶಿಯವರು ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ಕಿವ್ ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಸಧ್ಯ ಭಾರತೀಯ ಪ್ರಜೆಗಳು ಸುರಕ್ಷಿತವಾಗಿದ್ದು ಅವರನ್ನ ಭಾರತಕ್ಕೆ ವಾಪಸ್ ಕರೆತರಲು ಸರ್ವ ರೀತಿಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದ ಕಿವ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದ್ದಾರೆ, ವಿದ್ಯಾರ್ಥಿಗಳು ನಾಗರಿಕರಿಗಾಗಿ ಸಹಾಯವಾಣಿ ನಂಬರ್ ನೀಡಲಾಗಿದ್ದು, ಪ್ರಸ್ತುತ ವಿದ್ಯಮಾನಗಳ ಮಾಹಿತಿಗಾಗಿ ಸಾಮಾಜಿಕ ಜಾಲತಾಣದ ಜೊತೆ ಸಂಪರ್ಕವಿರುವಂತೆ ತಿಳಿಸಿದ್ದಾರೆ.