ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಎಸ್‌ವಿ ರಾಮಚಂದ್ರ ನೇಮಕ : ಸಂಸದ ಜಿಎಂ ಸಿದ್ದೇಶ್ವರ್ ವಿರುದ್ಧ ಆಕ್ರೋಶ
ದಾವಣಗೆರೆ: ಬಿ.ವಿ.ಚಂದ್ರಶೇಖರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಜಗಳೂರು ಶಾಸಕ ಹಾಗೂ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ ಅವರನ್ನು ನೇಮಕ ಮಾಡಲು ಮೂಲಕ ಸಂಸದ ಜಿ.ಎಂ.ಸಿದ್ದೇಶ್ವರ್ ಬಿಜೆಪಿ ಪಕ್ಷವನ್ನು ತಮ್ಮ ಇಚ್ಛೆಗೆ ಬಂದಂತೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ವಿದ್ಯಾನಗರದ ಶಿವಕುಮಾರ ಸ್ವಾಮಿ ಕ್ರೆಡಿಟ್ ಸೊಸೈಟಿ ನಿರ್ದೇಶಕ ಕುಂದೂರು ರಾಜಣ್ಣ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಕಡೆಗಣಿಸಿ ಜಗಳೂರು ಶಾಸಕ ಮತ್ತು ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ ಅವರನ್ನು ದಾವಣಗೆರೆ ಜಿಲ್ಲಾ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರನ್ನಾಗಿ ಕೋ ಅಪ್ ಮಾಡಿರುವುದು ಒಬ್ಬರಿಗೆ ಒಂದೇ ಹುದ್ದೆ ಎನ್ನುವ ಬಿಜೆಪಿ ತತ್ವ ಸಿದ್ದಾಂತಗಳಿಗೆ ಸಂಸದರು ಎಳ್ಳು ನೀರು ನೀರು ಬಿಟ್ಟಿದ್ದಾರೆ ಎಂದರು.
ಎಸ್.ವಿ.ರಾಮಚಂದ್ರ ಅವರು ಈಗಾಗಲೇ ಜಗಳೂರು ಪರಿಶಿಷ್ಟ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ವಿಧಾನಸಭೆಯಲ್ಲಿ ತಮ್ಮದೇ ಆದ ಅಧಿಕಾರ ಹೊಂದಿದ್ದಾರೆ. ಇದು ಸಾಲದು ಎನ್ನುವಂತೆ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹುದ್ದೆಯನ್ನು ಕೂಡ ಅಲಂಕರಿಸಿದ್ದಾರೆ. ಇರುವ ಈ ಎರಡು ಅಧಿಕಾರ ಸಾಲದು ಎನ್ನುವಂತೆ ಬಿ.ವಿ.ಚಂದ್ರಶೇರ್ಖ ಅವರ ಅಗಲಿಕೆಯಿಂದ ತೆರವಾದ ದಾವಣಗೆರೆ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಎಸ್.ವಿ.ರಾಮಚಂದ್ರ ಅವರನ್ನು ಕೋ ಆಪ್ ಮಾಡಿರುವುದಕ್ಕೆ ಆಕ್ಷೇಪಾರ್ಹ ಸಂಗತಿ ಎಂದು ಹೇಳಿದರು.
ಜನ ಸಂಘದ ಕಾಲದಿಂದಲೂ ಬಿಜೆಪಿ ಪಕ್ಷದ ಸಂಘಟನೆಗಾಗಿ ಕೆಲಸ ಮಾಡಿರುವ ಸಾಕಷ್ಟು ಹಿರಿಯ ನಿಷ್ಟಾವಂತ ಕಾರ್ಯಕರ್ತರಿದ್ದರು ಅವರ ಪೈಕಿ ಕೆ.ಬಿ.ಶಂಕರನಾರಾಯಣ, ವೈ.ಮಲ್ಲೇಶ್, ಜೆ.ಸೋಮನಾಥ್ ಪ್ರಮುಖರಾಗಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಬಿಎಂಎಸ್ ಕಟ್ಟಿಕೊಂಡು ಅದಕ್ಕಾಗಿ ಇಡೀ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಹಿರಿಯ ವಕೀಲರಾದ ತಿಮ್ಮಣ್ಣ ಅವರನ್ನು ನಿರ್ದೇಶಕ ಸ್ಥಾನಕ್ಕೆ ಕೋ ಆಪ್ ಮಾಡಿ ಅವರಿಗೆ ಗೌರವ ನೀಡಬೇಕಿತ್ತು. ಆದರೆ ಇದಾವುದನ್ನು ಮಾಡದೇ ಹಿರಿಯರನ್ನು ನಿರ್ಲಕ್ಷಿಸಿ ಎಲ್ಲ ಅಧಿಕಾರಗಳನ್ನು ನಾವೇ 4 ಮಂದಿ ಹಂಚಿಕೊಳ್ಳುವ ದುರಾಸೆಯಿಂದ ಸಂಸದ ಜಿ.ಎಂ.ಸಿದ್ದೇಶ್ವರ್ ಮತ್ತು ಎಸ್.ವಿ.ರಾಮಚಂದ್ರ ಹುನ್ನಾರು ನಡೆಸಿದ್ದಾರೆ ಎಂದು ಆರೋಪಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ವಿ.ರಾಮಚಂದ್ರ ಅವರ ಈ ನಡೆ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಹಕಾರ ಸಚಿವ ಅಮಿತ್ ಶಾ, ಕೇಂದ್ರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೂರು ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಲೋಕೇಶಚಾರ್ ಉಪಸ್ಥಿತರಿದ್ದರು.
ಗರುಡ ವಾಯ್ಸ್ ಜೊತೆ ಮಾತನಾಡಿದ ಶಾಸಕ ಎಸ್.ವಿ.ರಾಮಚಂದ್ರ , ಪಕ್ಷದ ವರಿಷ್ಟರ ತರ‍್ಮಾನಕ್ಕೆ ನಾನು ತಲೆ ಬಾಗುತ್ತೆನೆ, ಪಕ್ಷದ ಕಾರ್ಯಕರ್ತರು, ವರಿಷ್ಟರು ಏನು ಹೇಳ್ತಾರೆ ಅದನ್ನ ನಾನು ಮಾಡುತ್ತೆನೆ, ಅವರು ಹೇಳಿದ್ದನ್ನ ಮಾಡೋದು ನನ್ನ ಕೆಲಸ ಎಂದು ಪ್ರತಿಕ್ರಿಯೆ ನೀಡಿದ್ರು.
https://chat.whatsapp.com/KKoKihnFdmWGVs3kl4BVty