ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಬಗೆಯ ಪ್ರಯೋಗಗಳನ್ನು ಮಾಡಿ ಶಿಕ್ಷಣ ವಿನ್ಯಾಸವನ್ನೇ ಬದಲಿಸಿದ ಮಹನಿಯರ ಬಗ್ಗೆ ಮೆಚ್ಚಗೆ

ಬೆಂಗಳೂರು: ಪರಿವರ್ತನೆ ಶಿಕ್ಷಣ ವೆಂಬ ದೃಷ್ಟಿಕೋನದಿಂದ ಶಾಲೆಗಳ ಅಭಿವೃದ್ದಿಗೊಳಿಸಿದ ನಿಟ್ಟಿನಲ್ಲಿ ನ ಅಲೈಯನ್ಸ್ ವಿಶ್ವವಿದ್ಯಾಲಯ ಅಂತಹ ನಾಯಕರನ್ನು ಗುರುತಿಸಿ ಅವರನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ವಿವಿಧೆಡೆಯಿಂದ ಬಂದ ಶಾಲಾ ಪ್ರಾಂಶುಪಾಲರು ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡರು. ಈ ವೇಳೆ ಎಲ್ಲರನ್ನು ಸ್ವಾಗತಿಸಿ ಮಾತನಾಡಿದ pro vice ಚಾನ್ಸಲರ್ ಡಾ. ಪುನೀತ್ ಕರಿಯಪ್ಪ, ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಬಗೆಯ ಪ್ರಯೋಗಗಳನ್ನು ಮಾಡಿ ಶಿಕ್ಷಣ ವಿನ್ಯಾಸವನ್ನೇ ಬದಲಿಸಿದ ಮಹನಿಯರ ಬಗ್ಗೆ ಮೆಚ್ಚಗೆ ವ್ಯಕ್ತಪಡಿಸಿದರು.
ಹಾಗಯೇ ಸೃಜನಾತ್ಮಕ ದೃಷ್ಟಿಕೋನದಲ್ಲುಲಿ ಶೈಕ್ಷಣಿಕ ಚೌಕಟ್ಟನ್ನು ಹೇಗೆ ಹಾಕಿಕೊಳ್ಳಲಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲಿದರು. ಕಾರ್ಯಕ್ರಮ ಉದ್ಘಾಟನೆ ಮಾಡಿ, ಮಾತನಾಡಿದ ಸಹ ಕುಲಪತಿ ಜಿ ಚೆಬ್ಬಿ , ಶೈಕ್ಷಣಿಕ ರಂಗದಲ್ಲಿ ಬೆರೆತು ಹೋಗುತ್ತಿರುವ ಹಾಗೂ ಬೆರೆಯುತ್ತಿರುವ ತಂತ್ರಜ್ಞಾನದ ಮಹತ್ವ ಹಾಗೂ ಪ್ರಾಮುಖ್ಯತೆ ಕುರಿತಾಗಿ ಮಾತನಾಡಿದ್ರು.
ಕೆಳ ಮಟ್ಟದಿಂದಲೇ ತಾಂತ್ರಿಕತೆ ಅಳವಿಡಿಸಿಕೊಂಡು ಶಿಕ್ಷಣ ನೀಡಿದ್ದೇ ಆದಲ್ಲಿ ಎಂತಹ ಪ್ರತಿಭೆಗಳನ್ನು ಹುಟ್ಟು ಹಾಕಲು ಸಾಧ್ಯ ಎಂಬುದರ ಕುರಿತಾಗಿ ಸಲಹೆ ನೀಡಿದ್ರು.ಇಂದು ನಡೆದ ಹಲವು ವಿಚಾರಗೋಷ್ಟಿಯಲ್ಲಿ ಪಾಲ್ಗೊಂಡ ಹಲವು ಶಾಲಾ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಿಂದ ಮಹತ್ತರವಾದ ಅನುಭವವನ್ನು ಪಡೆದುಕೊಂಡ್ರು.