ಏಪ್ರಿಲ್ 30 ಹೆಚ್.ಎಸ್, ದೊಡ್ಡಶ್ ಸ್ನೇಹಬಳಗದ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ ಉಪವಾಸ ನಿರತ ಮುಸ್ಲಿಂ ಬಾಂಧವರಿಗೆ ಹಣ್ಣು ವಿತರಣೆ
ದಾವಣಗೆರೆ: ಹಿಂದು-ಮುಸಲ್ಮಾನರೆಂಬ ಬೇಧ-ಭಾವ ಮಾಡುತ್ತಿರುವ ಕೆಲವು ಕಿಡಿಕೇಡಿಗಳಿಗೆ ಎಚ್ಚರಿಕೆ ಗಂಟೆ.
ಅಂದರೆ ಮುಸಲ್ಮಾನರು ನಾವು ಅಣ್ಣ-ತಮ್ಮಂದಿರು, ಯಾರೋ ಕೆಲವರು ಹಿಂದುತ್ವ ವಿಚಾರವಾಗಿ ವಿಷದ ಬೀಜ ಬಿತ್ತುತ್ತಿದ್ದಾರೆ. ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ, ಇಲ್ಲಿ ಎಷ್ಟೋ ನಮ್ಮ ಆಣ್ಣ-ತಮ್ಮಂದಿರು, ಮುಸಲ್ಮಾನರು, ಕ್ರೈಸ್ತರು, ಬೌದ್ಧರು, ಹಿಂದೂಗಳು ನೆಲೆಸಿದ್ದಾರೆ. ಅದರಲ್ಲಿ ಡಾಕ್ಟರ್‌ಗಳು ಇದ್ದಾರೆ, ಯೋಧರಿದ್ದಾರೆ, ಪೊಲೀಸರಿದ್ದಾರೆ, ಆಂಬ್ಯುಲೆನ್ಸ್ ಡ್ರೈವರ್‌ಗಳಿದ್ದಾರೆ ಎಂಬಂತೆ ಎಲ್ಲಾ ಕ್ಷೇತ್ರದಲ್ಲೂ ಧರ್ಮದವರಿದ್ದಾರೆ.
ಮಾಧ್ಯಮದಲ್ಲೂ ಎಲ್ಲಾ ಧರ್ಮದ ನಮ್ಮ ಅಣ್ಣ-ತಮ್ಮಂದಿರಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಸಮಾಜ ಒಡೆಯುವ ಕೆಲಸ ಯಾರು ಮಾಡುತ್ತಾರೋ ಅಂಥವರನ್ನು ಈ ಸರ್ಕಾರ ಕಾನೂನು ಸುವ್ಯವಸ್ಥೆಯಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ,ಗಡಿಪಾರು ಮಾಡಲಿ, ಅದನ್ನು ಬಿಟ್ಟು ಹಿಂದು-ಮುಸಲ್ಮಾನ ಎಂಬ ಕೋಮುವಾದಿ ಚಟುವಟಿಕೆಗಳನ್ನು ಮಾಡುತ್ತಿರುವ ಕೆಲವರು ಈ ಸಮಾಜಕ್ಕೆ ಕಂಟಕಪ್ರಾಯರಾಗಿದ್ದಾರೆ.
ನಾವೆಲ್ಲಾ ಭಾರತಾಂಬೆಯ ಮಕ್ಕಳು, ನಮ್ಮ ದೇಶ, ನಮ್ಮ ರಾಜ್ಯಕ್ಕೆ ಯಾವುದೇ ಧರ್ಮದವರಿಂದ ತೊಂದರೆಯಾದ ಪಕ್ಷದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಅಂಥವರ ವಿರುದ್ಧ ಕಾನೂನು ಹೋರಾಟ ಮಾಡೋಣ ಎಂದು ಹೇಳಲು ಇಚ್ಛಿಸುತ್ತೇನೆ. ಈ ಸಮಾಜ ಒಡೆಯುವವರ ಕೆಲಸ ಮಾಡುತ್ತಿರುವವರ ಬಗ್ಗೆ ಘನವೆತ್ತ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಈ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.
ಈ ಬೇಧ ಭಾವವನ್ನು ಹೊಡೆದೋಡಿಸುವ ನಿಮಿತ್ತ ನಗರದ ಹೆಚ್.ಎಸ್, ದೊಡ್ಡಶ್ ಸ್ನೇಹಬಳಗದ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ ಉಪವಾಸ ನಿರತ ಮುಸ್ಲಿಂ ಬಾಂಧವರಿಗೆ ಹಣ್ಣು ವಿತರಣಾ ಕಾರ್ಯಕ್ರಮವನ್ನು ದಿ. 30-04-2022 ರ ಶನಿವಾರ ಸಂಜೆ 6.30ಕ್ಕೆ ನಗರದ ವಿನೋಬನಗರದ 3 ನೇ ಮೇನ್‌ನಲ್ಲಿರುವ ಮಸೀದಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಹೆಚ್.ಎಸ್. ದೊಡೇಶ್, ಚಲನಚಿತ್ರ ನಟರಾದ ಸೂರಜ್ ಸಾಸನೂರು, ಶೇರ್‌ಆಲಿ, ಅವಿನಾಶ್, ರುದ್ರೇಶ್ ಹೆಬ್ಬಾಳ್, ಮಧು, ಮುತ್ತು, ರಘು, ಚೇತನ್, ಆರೀಫ್, ಹರೀಶ್, ಮಂಜು, ಅಜಯ್, ಪ್ರವೀಣ್ ಲೋಕಿಕೆರೆ, ಪ್ರದೀಪ್ ಲೋಕಿಕೆರೆ, ಶರತ್, ನರೇಂದ್ರ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.